ರಾಮಾಯಣದಲ್ಲಿ ಲಕ್ಷ್ಮಣನನ್ನು ‘ಸಾವಿನ ಸ್ಥಿತಿಯಿಂದ’ ಹೊರಗೆ ತಂದ ‘ಸಂಜೀವನಿ’ ಗೆ ಅಂಥಹ ಅಪಾರ ಶಕ್ತಿ ಇದ್ದರೆ ಅದರಿಂದ ಮಾನವನ ಮುದಿತನವನ್ನೆ ‘U’ turn ಗೊಳಿಸಬಹುದು ಎಂದು ನಂಬಿ, ಕೆಲವು ಪಾಶ್ಚಾತ್ಯ ಸಂಶೋಧಕರು ಆ ಸಸ್ಯವನ್ನು ಹುಡುಕಲು ಪ್ರಯತ್ನಿಸುತ್ತಾರೆ. ಅವರಿಗೆ ಬೆನ್ನೆಲುಬಾಗಿ ನಿಂತ ಕೆಲವು ಕಾರ್ಪೊರೇಟ್ ಸಂಸ್ಥೆಗಳು ಭಾರತದ ಕೆಲವು ಅಮಾಯಕ ವಿಜ್ಞಾನಿಗಳನ್ನು ತಮ್ಮ ಷಡ್ಯಂತ್ರಕ್ಕೆ ಸಿಲುಕಿಸಿ ಆ ಸಸ್ಯದ ಹುಡುಕಾಟದಲ್ಲಿ ತೊಡಗಿಸುತ್ತಾರೆ. ಆ ಸಸ್ಯವನ್ನು ಭಾರತದಿಂದ ಕದ್ದೊಯ್ದು ವ್ಯಾಪಾರಿಕರಣಗೊಳಿಸಲು. ‘ಕಪಿಲಿಪಿಸಾರ’ ಸಂಜೀವನಿಯ ಬಗ್ಗೆ, ಆಗಿನ ಕಾಲದ ‘ವಾನರ’ ಕುಲದ ಬಗ್ಗೆ ಹಾಗೂ ಆ ಸಸ್ಯದ ಹುಡುಕಾಟದಲ್ಲಿ ನಡೆದ ರಹಸ್ಯ ಯೋಜನೆಗಳ ಬಗೆಗಿನ ಕಥಾನಕವನ್ನು ಈ ಕಾದಂಬರಿ ಒಳಗೊಂಡಿದೆ.
ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...
READ MORE