ಸತ್ಯಕಾಮ ಅವರ ‘ಕಪಿಲ ವಸ್ತು’ ಕಾದಂಬರಿ 2013ರಲ್ಲಿ ಅಂಕಿತ ಪುಸ್ತಕ ಮುದ್ರಣಗೊಳಿಸಿದೆ. ಈ ಕೃತಿಯು ಒಂದೇ ಗುಕ್ಕಿಗೆ ಸಿಗುವುದು ಕಷ್ಟ. ಕಪಿಲನೆಂಬ ಯುವಕನ ತಾಂತ್ರಿಕ ಜಗತ್ತಿನ ಕಥೆ ಇದು.. ಬಳ್ಳಾರಿಯಿಂದ ಹೊರಟು,ಕ್ರಾಂತಿಯ ಮುಖವಾಡ ಧರಿಸಿ ಕಲಬುರ್ಗಿ, ಉಡುಪಿ, ನಂತರ ಉಜ್ಜಯನಿ ಪುರಿ ಭುವನೇಶ್ವರ ಹೀಗೆ ಅನೇಕ ಊರುಗಳಲ್ಲಿ ಸುತ್ತಾಟ..ಬಂದು ಹೋಗುವ ಅನೇಕ ಪಾತ್ರಗಳು ಈ ಪುಸ್ತಕದಲ್ಲಿ ಕಾಣಬಹುದು... ನೀಲಾಂಬಿಕೆ, ಭಾಸ್ಕರ ಭಟ್ಟರು,ಭಟ್ಟಾಚಾರ್ಯರು,ಭೈರವಿ, ರಮಾಣಾನಂದ, ವಾಮಾಚರಣ ಹೀಗೆ ಹಲವು ಪಾತ್ರಗಳನ್ನು ಅಥೈಸಿಕೊಳ್ಳಬೇಕಾಗುತ್ತದೆ. ತಾಂತ್ರಿಕ ವಿದ್ಯೆಗಳ ಒಂದು ವಿಶಿಷ್ಟ ಲೋಕದ ಅನಾವರಣ ಕಪಿಲನ ಪಾತ್ರದ ಮುಖಾಂತರ ಕತೃ ಮಾಡುತ್ತಾರೆ.
’ಸತ್ಯಕಾಮ’ ಎಂಬುದು ಅನಂತ ಕೃಷ್ಣಾಚಾರ್ಯ ಶಹಾಪುರ ಅವರ ಕಾವ್ಯನಾಮ. ತಮ್ಮ ಕಾದಂಬರಿ ಹಾಗೂ ತಂತ್ರವಿದ್ಯೆ, ಕೃಷಿಯ ಮೂಲಕ ನಾಡಿನ ಮನೆ ಮಾತಾದವರು ’ಸತ್ಯಕಾಮ’. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ 1920ರ ಮಾರ್ಚ್ 2ರಂದು ಜನಿಸಿದರು. (ಕೆಲವು ಕಡೆ ಏಪ್ರಿಲ್ 16 ಎಂದು ದಾಖಲಾಗಿದೆ.) ಆರಂಭಿಕ ಶಿಕ್ಷಣವನ್ನು ಗಲಗಲಿಯಲ್ಲಿ ಪಡೆದ ಅವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಶಾಲೆಯ ಗೊಡವೆಗೇ ಹೋಗದೆ ಒಂದು ವರ್ಷ ಗಲಗಲಿಯಲ್ಲಿಯೇ ಕಳೆದರು. 1935ರಲ್ಲಿ ಬಾಗಲಕೋಟೆಯ ಸಕ್ರಿ ಹೈಸ್ಕೂಲಿಗೆ ಸೇರಿದರಾದರೂ ಓದು ಮುಂದುವರಿಸಲಿಲ್ಲ. ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದ 1930-31ರಲ್ಲಿ ಬಾಲಕ ಅನಂತ ...
READ MORE