ಲೇಖಕ ಎಸ್.ವಿ. ಶ್ರೀನಿವಾಸ ರಾವ್ ಅವರು ಬರೆದ ಸಾಮಾಜಿಕ ಕಾದಂಬರಿ-ಕನ್ಯಾದಾನ. ಘಟನೆ-ಸನ್ನಿವೇಶಗಳ ಸೃಷ್ಟಿ ಹಾಗೂ ಜೋಡಣೆ, ಕಥೆಯ ನಿರೂಪಣಾ ಶೈಲಿ, ಪಾತ್ರಗಳ ವ್ಯಕ್ತಿತ್ವಕ್ಕೆ ತಕ್ಕಂತೆ ಸಂಭಾಷಣೆ, ಅಗತ್ಯ ಬಿದ್ದಲ್ಲಿ ಗ್ರಾಮ್ಯ ಭಾಷೆಯ ಬಳಕೆ, ಇಂತಹ ಕೆಲ ಲಕ್ಷಣಗಳಿಂದ ಕಾದಂಬರಿ ಓದಿಸಿಕೊಂಡು ಹೋಗುತ್ತದೆ.
ಎಸ್.ವಿ. ಶ್ರೀನಿವಾಸರಾವ್ ಅವರು ತುಮಕೂರು ಜಿಲ್ಲೆಯ ಗೂಳೂರು ಹೋಬಳಿಯ ಚಿಕ್ಕಸಾರಂಗಿ ಗ್ರಾಮದಲ್ಲಿ 1931 ಡಿಸೆಂಬರ್ 24ರಂದು ಜನಿಸಿದರು. ಮನೆತನದಿಂದ ಶ್ಯಾನುಭೋಗರು. ತಂದೆ ಶ್ಯಾನುಭೋಗ್ ವೆಂಕಟರಾಮಯ್ಯ, ತಾಯಿ ಪುಟ್ಟಚ್ಚಮ್ಮ. ಬಿಎಸ್ಸಿ, ಎ.ಎಂ.ಐ.ಇ ಹಾಗೂ ಮೈಸೂರು ವಿ.ವಿ.ಯಿಂದ ಎಂ.ಎ. ಪದವೀಧರರು. ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಸಿಕ್ಯೂಎಎಲ್ ನಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಓದಿದ್ದು, ವಿಜ್ಞಾನವಾದರೂ ಸಾಹಿತ್ಯದ ಗೀಳು. ಕಾಡ ಬೆಳದಿಂಗಳು, ಮಬ್ಬು ಮುಂಜಾವು, ಸ್ವರಮೇಳ, ಇಬ್ಬನಿ, ರಂಗಸ್ಥಳ ಸೇರಿದಂತೆ 156ಕ್ಕೂ ಹೆಚ್ಚು ಕಥೆ, ಕಾದಂಬರಿಗಳು ಹಾಗೂ ಮಕ್ಕಳ ಸಾಹಿತಿಗಳ ಕುರಿತ ಮಕ್ಕಳೇ ಇವರನ್ನು ನೀವು ಬಲ್ಲಿರಾ ಕೃತಿ ಹಾಗೂ ...
READ MORE