ಲೇಖಕ ಕೆ.ಎನ್. ಗಣೇಶಯ್ಯ ಅವರು ಬರೆದ ಕಾದಂಬರಿ- ಕನಕ ಮುಸುಕು’ ತನ್ನ ಅನೇಕ ಹೊಸತುಗಳಿಂದ ಓದುಗರಿಗೂ ಮುಖ್ಯವಾಗುತ್ತದೆ. ಜೈನ ಪರಂಪರೆ ಶ್ರವಣಬೆಳಗೊಳಕ್ಕೆ ಲಗ್ಗೆ ಇಟ್ಟದ್ದು, ಚಂದ್ರಗುಪ್ತ ಮೌರ್ಯನ ಧರ್ಮ ಪ್ರಚಾರ ಹಾಗೆಯೇ ರೋಚಕತೆಗೆ ಇಲ್ಲಿಯೂ ಭೂಸಿರಿ ವಲಯದ ಹುಡುಕಾಟದತ್ತ ಸಾಗುತ್ತ ಕಾದಂಬರಿಯ ನಾಯಕಿಯೂ ಆ ಕಾಲದ ಹೈಟೆಕ್ ಸಂಪರ್ಕ ತಂತ್ರಗಳನ್ನು ಬಳಸಿ, ಚೂಟಿಯಾಗಿ ಗ್ಲೋಬ್ ಟ್ಯ್ರಾಕಿಂಗ್ ಮಾಡುತ್ತ ಭೂತ-ಭವಿಷ್ಯಗಳನ್ನು ಬೆಸೆಯುವ ಇವೆಲ್ಲವೂ ಇತಿಹಾಸದ ಮಗ್ಗುಲನ್ನು ಕಣ್ಣ ಮುಂದೆ ತೆರೆದಿಡುತ್ತವೆ.
ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...
READ MORE