ತ. ರಾ. ಸುಬ್ಬರಾಯರ ಐತಿಹಾಸಿಕ ಕಾದಂಬರಿ 'ಕಂಬನಿಯ ಕುಯಿಲು', 2013ರಲ್ಲಿ 12ನೇ ಬಾರಿ ಮುದ್ರಣಗೊಂಡು ಬಿಡುಗಡೆಯಾಗಿದೆ.. ಚಿತ್ರದುರ್ಗದ ಇತಿಹಾಸವನ್ನು ವಸ್ತುವನ್ನಾಗಿಟ್ಟುಕೊಂಡು ರಚಿತವಾಗಿರುವ ʻಕಂಬನಿಯ ಕುಯಿಲುʼ ತ. ರಾ.ಸು ಅವರ ಕಾದಂಬರಿಗಳಲ್ಲಿ ಮೊದಲನೇಯದ್ದು. ಪಾಳೇಗಾರರ ಆಳ್ವಿಕೆಯ ಕಾಲದ ಭವ್ಯಚಿತ್ರಣವಿದೆ. ವಂಶಪಾರಂಪರಿಕವಾಗಿ ಬರುವ ಅಧಿಕಾರವನ್ನು ಮುನ್ನಡೆಸಿಕೊಂಡು ಹೋಗಲು ಯೋಗ್ಯ ವ್ಯಕ್ತಿಯ ಅನುಪಸ್ಥಿತಿ ಹಾಗೂ ಮದಕರಿ ನಾಯಕನಿಗೆ ಗಂಡು ಸಂತಾನ ಇಲ್ಲದಿರುವ ಲಾಭವನ್ನು ಅಧಿಕಾರದ ಆಸೆಗೆ ದುರುಪಯೋಗ ಮಾಡಿಕೊಳ್ಳುವ ಮುದ್ದಣ್ಣನ ಒಳಸಂಚಿನ ಕಥಾಹಂದರದ ಕಾದಂಬರಿ ಇದು.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE