ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು.
ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ಬೆಂಕಿಯ ಬಲೆ, ಗಾಳಿ ಮಾತು, ಬಿಡುಗಡೆಯ ಬೇಲಿ, ಮಸಣದ ಹೂ. ಸಾಮಾಜಿಕ ಕಾದಂಬರಿಗಳು : ಮನೆಗೆ ಬಂದ ಮಹಾಲಕ್ಷ್ಮಿ, ಬೇಡದ ಮಗು, ಕಾರ್ಕೋಟಕ, ಮಾರ್ಗದರ್ಶಿ, ಪಂಜರದ ಪಕ್ಷಿ, ಖೋಟಾನೋಟು ಸೇರಿದಂತೆ ಒಟ್ಟು 18ಕಾದಂಬರಿಗಳು, ಹಾಗೂ ಬೆಳಕು ತಂದ ಬಾಲಕ ಹಾಗೂ ನಾಲ್ಕು+ನಾಲ್ಕು : ಇವು ಪೌರಾಣಿಕ ಕಾದಂಬರಿಗಳು.. ರೂಪಸಿ, ತೊಟ್ಟಿಲು ತೂಗಿತು, ಮಲ್ಲಿಗೆಯ ನಂದನದಲ್ಲಿ, ಇದೇ ನಿಜವಾದ ಸಂಪತ್ತು-ಇವು ಕಥಾ ಸಂಕಲನಗಳು. ನಾಟಕಗಳು: ಜ್ವಾಲಾ.,ಮೃತ್ಯು ಸಿಂಹಾಸನ, ಅನ್ನಾವತಾರ ಹಾಗೂ ಮಹಾಶ್ವೇತೆ.
ದುರ್ಗಾಸ್ತಮಾನ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1985) ಲಭಿಸಿದೆ., 1984 ಏಪ್ರಿಲ್ 10 ರಂದು ನಿಧನರಾದರು.