ಸತ್ಯಕಾಮ ಅವರು ಲೇಖನಗಳ ಸಂಕಲನ ’ಕಣ್ಣಿನಲ್ಲಿ ಕಾಲಿರಲಿ’. ಈ ಸಂಕಲನದಲ್ಲಿ ಅವರ ಹಲವು ಅಪ್ರಕಟಿತ ಲೇಖನಗಳಿವೆ. ಕೆಲವು ಪ್ರಕಟಿತ ಲೇಖನಗಳಿವೆ. ಬಹುತೇಕ ಲೇಖನಗಳು ಅಪ್ರಕಟಿತ. ಈ ಪುಸ್ತಕದಲ್ಲಿ ’ತರಂಗ’ದ ಸಂಪಾದಕರಾಗಿದ್ದ ಸಂತೋಷ್ ಕುಮಾರ್ ಗುಲ್ವಾಡಿ ಮತ್ತು ಸಂಗಡಿಗರು ನಡೆಸಿದ ಸಂದರ್ಶನ ಗಮನ ಸೆಳೆಯುವ ಹಾಗಿದೆ. ಈ ಗ್ರಂಥದಲ್ಲಿ ಯು.ಆರ್. ಅನಂತಮೂರ್ತಿ ಅವರ ’ಭವ’ ಕಾದಂಬರಿಯ ಬಗ್ಗೆ ಬರೆದ ವಿಮರ್ಶಾತ್ಮಕ ಲೇಖನ ಹಾಗೂ ಜಮ್ಮು ಕಾಶ್ಮೀರದ ಇಂದಿನ ಪರಿಸ್ಥಿತಿ ಹಾಗೂ ಪಂಡಿತರ ಶೋಚನೀಯ ಸ್ಥಿತಿಯ ಬಗ್ಗೆ ಲೇಖನ ಇದೆ. ಬನ್ನಂಜೆ ಗೋವಿಂದಾಚಾರ್ಯರ ಬಗ್ಗೆ ಮೆಚ್ಚುಗೆ ಮಾತಗಳನ್ನಾಡಿರುವ ಒಂದು ಬರಹ ಕೂಡ ಇದೆ.
’ಸತ್ಯಕಾಮ’ ಎಂಬುದು ಅನಂತ ಕೃಷ್ಣಾಚಾರ್ಯ ಶಹಾಪುರ ಅವರ ಕಾವ್ಯನಾಮ. ತಮ್ಮ ಕಾದಂಬರಿ ಹಾಗೂ ತಂತ್ರವಿದ್ಯೆ, ಕೃಷಿಯ ಮೂಲಕ ನಾಡಿನ ಮನೆ ಮಾತಾದವರು ’ಸತ್ಯಕಾಮ’. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ 1920ರ ಮಾರ್ಚ್ 2ರಂದು ಜನಿಸಿದರು. (ಕೆಲವು ಕಡೆ ಏಪ್ರಿಲ್ 16 ಎಂದು ದಾಖಲಾಗಿದೆ.) ಆರಂಭಿಕ ಶಿಕ್ಷಣವನ್ನು ಗಲಗಲಿಯಲ್ಲಿ ಪಡೆದ ಅವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಶಾಲೆಯ ಗೊಡವೆಗೇ ಹೋಗದೆ ಒಂದು ವರ್ಷ ಗಲಗಲಿಯಲ್ಲಿಯೇ ಕಳೆದರು. 1935ರಲ್ಲಿ ಬಾಗಲಕೋಟೆಯ ಸಕ್ರಿ ಹೈಸ್ಕೂಲಿಗೆ ಸೇರಿದರಾದರೂ ಓದು ಮುಂದುವರಿಸಲಿಲ್ಲ. ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದ 1930-31ರಲ್ಲಿ ಬಾಲಕ ಅನಂತ ...
READ MORE