‘ಕೈದಿಗಳ ಕಥನ’ (ರಂಗ ಸಂಗದಿಂದ ಬದಲಾದವರು) ಗಣೇಶ ಅಮೀನಗಡ ಅವರು ರಚಿಸಿರುವ ಕೃತಿ. ಜೀವಾವಧಿ ಶಿಕ್ಷೆಯಾಗಿ ಜೈಲಿನಲ್ಲಿ ಬಂದಿಯಾಗಿದ್ದ ಕೈದಿಗಳಿಗೆ ನಡೆಸುವ ಮನಃಪರಿವರ್ತನಾ ಶಿಬಿರದಂತಹ ಸುಧಾರಣ ಕ್ರಮಗಳ ವೇಳೆ ರಂಗಾಯಣ ತಂಡವೊಂಡು ಜೈಲು ಕೈದಿಗಳೊಂದಿಗೆ ರಂಗತಾಲೀಮು ನಡೆಸುತ್ತದೆ. ಈ ವೇಳೆ ಕೈದಿಗಳೇ ರಂಗಭೂಮಿಯ ಪಾತ್ರಗಳನ್ನು ನಿರ್ವಹಿಸುತ್ತಾರೆ. ರಂಗಕರ್ಮಿ, ಮತ್ತು ಲೇಖಕರು ಅಪರಾಧಿಗಳ ಕುರಿತು ವಿಚಾರಿಸಿದಾಗ ಅವರು ಹೇಳಿದ ಕಥೆಗಳು ಮತ್ತು ರಂಗದಲ್ಲಿ ನಟನೆ ಅವರೊಳಗೆ ಹುಟ್ಟಿಸಿದ ಭಾವನೆಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ
ಊರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಅಮೀನಗಡ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ., ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 'ಕನ್ನಡ ಬಂಡಾಯ ಕಾವ್ಯದಲ್ಲಿ ಪ್ರತಿಮಾ ಸಂವಿಧಾನ ಕುರಿತು ಪಿಎಚ್.ಡಿ. ಮೂರು ವರ್ಷ ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತರಾಗಿ ಸೇವೆ, ಈಗ ಮೈಸೂರಲ್ಲಿ ಪ್ರಜಾವಾಣಿಯ ಮುಖ್ಯ ವರದಿಗಾರ. ರಂಗಭೂಮಿ ಕುರಿತ ಲೇಖನಗಳ ಸಂಕಲನ 'ಪ್ರಯೋಗ ಪ್ರಸಂಗ' ಕೃತಿ (2004), ವಿಜಾಪುರದ ಯುವ ಲೇಖಕರ ವೇದಿಕೆಯ ಪ್ರಶಸ್ತಿ, ಸೇಡಂನ ಅಮ್ಮ ಪ್ರಶಸ್ತಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಗಳಿಂದ ಪುರಸ್ಕೃತಗೊಂಡಿದೆ. ಏಣಗಿ ಬಾಳಪ್ಪ ಅವರ ರಂಗಾನುಭವ ಕಥನ 'ಬಣ್ಣದ ಬದುಕಿನ ಚಿನ್ನದ ದಿನಗಳು' ...
READ MORE