ಕೈ ಹಿಡಿದು ನಡೆಸಬೇಕೇ

Author : ಮಹಾಬಲೇಶ್ವರ ರಾವ್

Pages 200

₹ 190.00




Year of Publication: 2021
Published by: ಸಂಸ್ಕೃತಿ ಬುಕ್ ಏಜನ್ಸೀಸ್
Address: #909 / 1ನೇ ಬಿ, ಪದ್ಮ, ಮೊದಲನೇ ಮಹಡಿ, ಮೊದಲನೇ ರೋಡ್, ಲಕ್ಷ್ಮೀಪುರಂ, ಮೈಸೂರು-5700024
Phone: 9886175010

Synopsys

‘ಕೈ ಹಿಡಿದು ನಡೆಸಬೇಕೇ’ ಕೃತಿಯು ಮಹಾಬಲೇಶ್ವರ ರಾವ್ ಅವರ ಲೇಖನಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ, ಉತ್ತಮ ತಂದೆ ತಾಯಿಗಳಾಗುವುದು ಹೇಗೆ? ಎಂದು ತಿಳಿಸುವ ಪುಸ್ತಕ ಇದಲ್ಲ. ಮಗುವನ್ನು ಯಾವ ಮಾಧ್ಯಮದ ಶಾಲೆಗೆ ಸೇರಿಸಬೇಕು ಎಂಬ ಬಗ್ಗೆ ಸಲಹೆ ನೀಡುವ ಕೃತಿಯೂ ಇದಲ್ಲ. ವಿವಿಧ ಬಗೆಯ ಪಠ್ಯಕ್ರಮಗಳ ಬಗ್ಗೆ ವಿವೇಚಿಸುವುದೂ ಇವರ ಉದ್ದೇಶವಲ್ಲ. ಸರಕಾರಿ ಅಥವಾ ಖಾಸಗಿ ಶಾಲೆಯ ಆಯ್ಕೆಯ ಚರ್ಚೆ ಈ ಪುಸ್ತಕದ ಗುರಿಯಲ್ಲ. ಮಕ್ಕಳು ವಿದ್ವಾವಂತರಾಗುವಲ್ಲಿ ಪಾಲಕರ ಪಾತ್ರ ಹಾಗೂ ಜವಾಬ್ದಾರಿಗಳನ್ನು ಚರ್ಚಿಸುವುದು ಈ ಕೃತಿಯ ಮುಖ್ಯ ಉದ್ದೇಶ. ಕೇಂದ್ರ ಹಾಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳನ್ನು ಕೈ ಹಿಡಿದು ನಡೆಸಬೇಕೇ? ಕೈ ಬಿಟ್ಟು ನಡೆಸಬಹುದೇ? ಎಂಬುದನ್ನು ಅಧ್ಯಯನ ಹಾಗೂ ಅನುಭವದ ಆಧಾರದಲ್ಲಿ ಪರಾಮರ್ಶಿಸುವುದು ಈ ಕೃತಿಯ ಪ್ರಧಾನ ಉದ್ದೇಶ. ಸದ್ಯದ ಸಾಮಾಜಿಕ ಸಂದರ್ಭದಲ್ಲಿ ಆಧುನಿಕ ಶಿಕ್ಷಣದ ಮಹತ್ತ್ವ, ಶಾಲೆಗಳು ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ದೃಷ್ಟಿಯಿಂದ ಶಾಲಾ ಶಿಕ್ಷಣದಲ್ಲಿ ಮಾಡಬೇಕಾದ ಮಧ್ಯ ಪ್ರವೇಶವನ್ನು ನುರಿತ ಶಿಕ್ಷಣ ಚಿಂತಕ ಡಾ. ಮಹಾಬಲೇಶ್ವರ ರಾವ್ ಈ ಕೃತಿಯಲ್ಲಿ ಸ್ವಾರಸ್ಯಕರವಾಗಿ ಮತ್ತು ಅಷ್ಟೇ ಗಂಭೀರವಾಗಿ ಪರಾಮರ್ಶಿಸಿದ್ದಾರೆ. ಮಕ್ಕಳ ಶಿಕ್ಷಣದಲ್ಲಿ ಆಸಕ್ತರಾದವರೆಲ್ಲರೂ ಚಿಂತನ ಮಂಥನ ಮಾಡಲು ಈ ಕೃತಿ ಆಹ್ವಾನಿಸುತ್ತದೆ’ ಎಂದಿದೆ.

About the Author

ಮಹಾಬಲೇಶ್ವರ ರಾವ್

ಮಹಾಬಲೇಶ್ವರ ರಾವ್ ಅವರು 1952ರಲ್ಲಿ ಉಡುಪಿ ಜಿಲ್ಲೆಯ ಮಣೂರಿನಲ್ಲಿ ಜನಿಸಿದರು. ಎಂ.ಎ., ಎಂ.ಎಡ್ ಮತ್ತು ಪಿಎಚ್.ಡಿ. ಪದವೀಧರರಾದ ಅವರು ಆರು ವರ್ಷ ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ, ಮೂರು ವರ್ಷ ಆಕಾಶವಾಣಿಯ ಭದ್ರಾವತಿ ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪ್ರಸಾರಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಾಬಲೇಶ್ವರ ರಾವ್‌ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷಾ ಬೋಧನೆ, ಬರವಣಿಗೆ, ಭಾಷಣ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲೇಖಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ ತಮ್ಮದೇ ಛಾಪು ಮೂಡಿಸಿರುವ ಅವರು 14ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.  ’ಉದಯವಾಣಿ’, ’ಪ್ರಜಾವಾಣಿ’, ’ತರಂಗ’, ’ಹೊಸತು’ ಮೊದಲಾದ ಕನಡ ದಿನಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಅವರ ನೂರಾರು ಲೇಖನಗಳನ್ನು ಪ್ರಕಟಣೆ ಕಂಡಿವೆ.  ...

READ MORE

Related Books