ಎಚ್.ಎನ್ ರಾಜ್ಯಶ್ರೀ ಅವರ ಕವನ ಸಂಕಲನ ’ಕಾಡುವ ನೆನಪುಗಳು’.
ತುಂಡುಫ್ರಾಕ್ ನ ಹೊಟ್ಟೆ ಕಾಣುವ ಟಾಪ್
ಕಾಲಸರಿದದ್ದೇ ತಿಳಿಯಲಿಲ್ಲ
ಫ್ರಾಕಿನಿಂದ ಲಂಗಕ್ಕೆ
ಲಂಗದಿಂದ ಚೂಡಿಗೆ
ಅಂಗಿ ಬದಲಿಸಿದಂತೆ ಆಟ
ರತ್ತೋ ರತ್ತೋ ರಾಯನ ಮಗಳೆ
ಎಂದು ಬರೆಯುವ ರಾಜ್ಯಶ್ರೀ ಅವರ ರಚನೆಗಳಲ್ಲಿ ತುಂಟತನವೂ, ನೆರಳಿನಂತೆ ಕಾಡುವ ಬಾಲ್ಯದ ಸಂಭ್ರಮಗಳ ಜೊತೆ ವಿಷಾದ ಹುಟ್ಟಿಸುವುದನ್ನು ಕಾಣಬಹುದು.
ಕಾಡುವ ನೆನಪುಗಳು, ಅಪ್ಪಾಜಿ, ನನ್ನಮ್ಮ, ಅತ್ತಿಮಬ್ಬೆ ಎಂದರೆ, ಹುತ್ತರಿ, ಮಹಾವೀರ, ಮಂಕುತಿಮ್ಮನ ಕಗ್ಗ ಮುಂತಾದವುಗಳು ಈ ಕವನ ಸಂಕಲನದಲ್ಲಿನ ಮುಖ್ಯವಾದ ರಚನೆಗಳು.
ಕವಿ, ಲೇಖಕಿ ಹಾಗೂ ಉತ್ತಮ ವಾಗ್ಮಿಯಾಗಿರುವ ರಾಜ್ಯಶ್ರೀ ಎಚ್.ಎನ್ ಅವರು ಬಿ.ಎಸ್.ಸಿ, ಡಿಪ್ಲಮಾ-ಇನ್-ಕಂಪ್ಯೂಟರ್, ಹಾಗೂ ಎಂ.ಎ ಪದವಿದರರು. ಭಾರತೀಯ ಜೀವವಿಮಾ ನಿಗಮದಲ್ಲಿ ಕೆಲಸಮಾಡುತ್ತಿರುವ ಇವರು ಓದು, ಬರಹವನ್ನು ಹವ್ಯಾಸವಾಗಿಸಿಕೊಂಡಿದ್ದಾರೆ.ಏಕಪಾತ್ರಾಭಿನಯದಲ್ಲಿ ರಾಜ್ಯ ಪ್ರಶಸ್ತಿ ವಿಜೇತೆಯಾಗಿರುವ ರಾಜ್ಯಶ್ರೀ ದೂರದರ್ಶನದಲ್ಲಿ ನೂರಕ್ಕೂ ಹೆಚ್ಚು ಸಂದರ್ಶನ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಕಾಡುವ ನೆನಪುಗಳು ಇವರ ಎರಡನೆಯ ಸಂಕಲನ. ಮೊದಲನೆ ಸಂಕಲನ ಅರ್ಥ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಜನಪ್ರಿಯ ಜನರಲ್ ಮೇನೇಜರ್ ವಿ.ನವರತ್ನರಾಜು ಕುರಿತು ಜಿವನ ಚರಿತ್ರೆ ಬರೆದಿದ್ದು ಇದೊಂದು ಗದ್ಯಗ್ರಂಥವಾಗಿದೆ. ರಾಜ್ಯಶ್ರೀ ಅವರು ಹಿರಿಯ ಸಾಹಿತಿಗಳು ಹಾಗೂ ನಾಡೋಜ ದಂಪತಿಗಳಾದ ಪ್ರೊ.ಕಮಲಾ-ಹಂಪನಾ ಅವರ ...
READ MORE