‘ಕಾಡು ಹೇಳಿದ ಕಥೆಗಳು’ ಐತಿಚಂಡ ರಮೇಶ್ ಉತ್ತಪ್ಪನವರ ಕೃತಿಯಾಗಿದೆ. ಇದಕ್ಕೆ ಸುದರ್ಶನ ಚನ್ನಂಗಿಹಳ್ಳಿ ಅವರ ಬೆನ್ನುಡಿ ಬರಹವಿದೆ; ವನ್ಯಜೀವಿಗಳ ಬದುಕಿನ ಕುರಿತು ನಮಗೆ ಇನ್ನಷ್ಟು ಬೆಳಕು ಚೆಲ್ಲುವ, ರೋಚಕ ಘಟನೆಗಳು, ಮನಮಿಡಿಯುವ ಪ್ರಸಂಗಗಳನ್ನು ಕಟ್ಟಿಕೊಡುವ ಕೃತಿ 'ಕಾಡು ಹೇಳಿದ ಕಥೆಗಳು'. ಕಾಡಿನಲ್ಲಿ ನಡೆಯುವ ಇಂತಹ ವಿಶೇಷ ಘಟನೆಗಳನ್ನು ಲೇಖಕ ಐತಿಚಂಡ ರಮೇಶ್ ಉತ್ತಪ್ಪ ನಮ್ಮ ಕಣ್ಣೆದುರು ನಡೆಯುವಂತೆ ಕಟ್ಟಿಕೊಟ್ಟಿದ್ದಾರೆ. ಒಂದೊಂದು ಅಧ್ಯಾಯ ಕೂಡ ಕುತೂಹಲಕಾರಿಯಾಗಿದೆ. ಪರಿಸರ ಪ್ರೇಮಿಗಳಿಗೆ, ವನ್ಯಜೀವಿ ಪ್ರೀತಿಸುವವರಿಗೆ, ವಿದ್ಯಾರ್ಥಿಗಳಿಗೆ, ಸಾಹಿತ್ಯ ಆಸಕ್ತರಿಗೆ ಸೇರಿದಂತೆ ಎಲ್ಲಾ ರೀತಿಯ ಓದುಗರಿಗೆ ಇಷ್ಟವಾಗುವ ಅಪರೂಪದ ಕೃತಿ. ಇಲ್ಲಿನ ಹಲವು ಘಟನೆಗಳು ಬಹುಕಾಲದ ತನಕ ಕಾಡುತ್ತಲೇ ಇರುತ್ತವೆ.
ಲೇಖಕ ಐತಿಚಂಡ ರಮೇಶ ಉತ್ತಪ್ಪ ಅವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವರದಿಗಾರರು. ಕೃತಿಗಳು: ಆನೆ ಲೋಕದ ವಿಸ್ಮಯ, ಕುಶಾ ಕೀ ಕಹಾನಿ, ಅಭಿಮನ್ಯು ಗ್ರೇಟ್ ...
READ MORE