ಕೆ. ಜಿ. ನಾಗರಾಜಪ್ಪ

Author : ಡಿ. ವಿಜಯಲಕ್ಷ್ಮಿ

Pages 125

₹ 136.00




Year of Publication: 2022
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

ಕೆ. ಜಿ. ನಾಗರಾಜಪ್ಪ ಅವರ ಕುರಿತು ಡಿ.ವಿಜಯಲಕ್ಮ್ಷಿ ಅವರು ರಚಿಸಿದ ಕೃತಿಯಾಗಿದೆ. 'ನವಕರ್ನಾಟಕ ಸಾಹಿತ್ಯ ಸಂಪದ" ಮಾಲಿಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರನ್ನು ಕುರಿತಂತೆ ಪ್ರಕಾಶನದವರು ರೂಪಿಸಿದ ಮಹತ್ವದ ಯೋಜನೆ. ಈ ಯೋಜನೆಯಲ್ಲಿ ಈ ಮೊದಲು ವ್ಯಾಸರಾಯ ಬಲ್ಲಾಳರ ಬದುಕು-ಬರೆಹವನ್ನು ಕುರಿತು ಕೃತಿ ರಚನೆ ಮಾಡುವ ಅವಕಾಶವನ್ನು ನನ್ನ ಮಾರ್ಗದರ್ಶಕ ಗುರುಗಳಾದ ಡಾ. ಪ್ರಧಾನ ಗುರುದತ್ತ ಅವರು ನನಗೆ ಒದಗಿಸಿ ಕೊಟ್ಟಿದ್ದರು. ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕನ್ನಡದ ಅಪರೂಪದ ಚಿಂತಕ, ವಿಮರ್ಶಕರಾದ ಕೆ. ಜಿ. ನಾಗರಾಜಪ್ಪ ಅವರ ಕುರಿತು ಕೃತಿ ರಚನೆ ಮಾಡುವ ಅವಕಾಶವನ್ನು ನೀಡಿದ್ದಾರೆ. ನನ್ನ ಮೇಲಿನ ಭರವಸೆಯಿಂದ ಕೃತಿ ರಚನೆಯ ಹೊಣೆಯನ್ನು ನೀಡಿದ ಗುರುಗಳಾದ ಡಾ. ಪ್ರಧಾನ ಗುರುದತ್ತ ಅವರಿಗೆ ಗೌರವಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಬಯಸುತ್ತೇನೆ. ನನ್ನ ಪರಿಮಿತಿಯೊಳಗೆ ಕೆ. ಜಿ. ನಾಗರಾಜಪ್ಪ ಅವರ ಚಿಂತನೆಗಳನ್ನು ಅರ್ಥೈಸಲು ಸಾಧ್ಯವಾದಷ್ಟು ಪ್ರಯತ್ನಿಸಿದ್ದೇನೆ. ಕನ್ನಡದ ಸಾಹಿತ್ಯಾಸಕ್ತರಿಗೆ ಈ ಕೃತಿ ಪ್ರಿಯವಾಗ ಬಹುದು. ಕೆಜಿಎನ್ ಮತ್ತು ಕನ್ನಡ ವಿಮರ್ಶೆಯ ಅಧ್ಯಯನಾಸಕ್ತರಿಗೆ ಸಹಾಯಕವಾಗಬಹುದು ಎಂಬ ವಿಶ್ವಾಸ ನನ್ನದು ಎಂದು ಡಿ. ವಿಜಯಲಕ್ಷ್ಮಿ ಅವರು ಲೇಖಕರ ನುಡಿಯಲ್ಲಿ ತಿಳಿಸಿದ್ದಾರೆ.

Related Books