ಜೀವನವದೊಂದು ಕಲೆ

Author : ಎಸ್. ಸೂರ್ಯಪ್ರಕಾಶ್ ಪಂಡಿತ್

₹ 120.00




Year of Publication: 2018
Published by: ಅಭಿಜ್ಞಾನ ಪ್ರಕಾಶನ
Address: ಬೆಂಗಳೂರು

Synopsys

‘ಜೀವನವದೊಂದು ಕಲೆ’ ಕೃತಿಯು ಎಸ್.ಸೂರ್ಯಪ್ರಕಾಶ ಪಂಡಿತ್ ಅವರ ಲೇಖನ ಸಂಗ್ರಹ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಶತಾವಧಾನಿ ಆರ್. ಗಣೇಶ್ ಅವರು, ಸೂರ್ಯಪ್ರಕಾಶ ಪಂಡಿತ್ ಮಹನೀಯರ ಕೃತಿಗಳಿಂದ, ಮಹಿಮೋನ್ಮತರ ಬಾಳಿನಿಂದ ಮಿಗಿಲಾದ ಪ್ರೇರಣೆ ಪಡೆದವರು. ಹೀಗೆ ಕಥೆ ಮತ್ತು ಜೀವನಗಳ ಸ್ವಾರಸ್ಯ-ಸೂಕ್ಷತೆಗಳನ್ನು ನಿರಂತರವಾಗಿ ಅನುಸಂಧಾನಿಸುತ್ತ ಬಂದವರು; ತಾವೊಲಿದ ಶಸ್ತ್ರಕ್ಕೆ ಸಮರ್ಪಿತವಾಗಿ ಸಲ್ಲುವಲ್ಲಿ ‘ಜೀವನದದೊಂದು ಕಲೆ’ ಅವರ ನೆಲೆ, ಬಲ, ಇಂಥ ಸಂವೇದನೆಶೀಲರ ಹೃದಯಂಗಮವಿಚಾರಲಹರಿ ಸದ್ಯದ ಕಿರುಹೊತ್ತಿಗೆಯಲ್ಲಿ ಅಂದವಾಗಿ ಅಡಕವಾಗಿದೆ. ಇಲ್ಲಿಯ ಹೂರಣವಂತೂ ವಿಶ್ವಜೀವನ, ಜಗತ್ಮಲೆಯ ಸ್ವಾರಸ್ಯಭೂಮಿಕೆಗಳನ್ನು ಬಗೆಗಾಣಿಸುವ ಋಷಿಪರಂಪರೆಯ ಪರಿಪಾಕ, ವಿಭೂತಿ ವಾಕ್ಯಗಳ ಮಣಿಪ್ರವಾಳ ಇದಕ್ಕೆ ಸರಿಮಿಗಿಲೆನಿಸುವಂಥದ್ದು ಪಂಡಿತರ ಪಾವನೋದಾರ-ಭಾಷಾಪಾಕ, ಇಂಥ ಕನ್ನಡವು ಎಂದೆದೂ ಬಾಳಬೇಕಾದ ಭಾಗ್ಯ. ಇದು ನಿಜಕ್ಕೂ ಕಲೆಯಾಗದ ನುಡಿಯ ಜೀವನ ಎಂದು ವಿಶ್ಲೇಷಿಸಿದ್ದಾರೆ

About the Author

ಎಸ್. ಸೂರ್ಯಪ್ರಕಾಶ್ ಪಂಡಿತ್

ಎಸ್. ಸೂರ್ಯಪ್ರಕಾಶ್ ಪಂಡಿತ್ ಅವರು ಪತ್ರಕರ್ತ ಹಾಗೂ ಅಭಿಜ್ಞಾನ ಸಂಪಾದಕರು. ಪ್ರಸ್ತುತ ಪ್ರಜಾವಾಣಿಯ ಮುಖ್ಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು : ಜೀವನವದೊಂದು ಕಲೆ, ನಮ್ಮಲ್ಲಿಯೇ ಇರುವ ದೈವತ್ವ ರಾಕ್ಷಸತ್ವ. ...

READ MORE

Related Books