ಜೀವನ ಜಾಗೃತಿ – 4

Author : ಪ.ರಾ. ಕೃಷ್ಣಮೂರ್ತಿ

Pages 464

₹ 300.00




Year of Publication: 2017
Published by: ಸಾಹಿತ್ಯ ನಂದನ

Synopsys

ಲೇಖಕ ಪ.ರಾ. ಕೃಷ್ಣಮೂರ್ತಿ ಅವರ ಕೃತಿ ಜೀವನ ಜಾಗೃತಿ – 4, ಓಶೋ ಅವರ ಸಮಗ್ರ ಜೀವನ ಚರಿತ್ರೆ ಇದಾಗಿದೆ. ತಾವೆಲ್ಲರೂ ತಮಗೆ ತಾವೇ ಗುರುಗಳಾಗಬೇಕು. ಜ್ಞಾನೋದಯ ಹೊಂದಿದ ವ್ಯಕ್ತಿಗಳು ಏಕಾಂಗಿಯಾಗಿರುತ್ತಾರೆ. ಅವರೂ ಉತ್ತರಾಧಿಕಾರಿಯಾಗಿರಲಿಲ್ಲ; ಮತ್ತು ಅವರಿಗೂ ಯಾರೂ ಉತ್ತರಾಧಿಕಾರಿ ಇರುವುದಿಲ್ಲ. ಒಂಟಿಯಾಗಿ ಮುಂದುವರಿಯುವುದೇ ಶ್ರೇಷ್ಠ. ಹಾಗೆಂದು ಜಗತ್ತನ್ನು ತ್ಯಜಿಸಿ ಎಂದು ಹೇಳುವುದಿಲ್ಲ. ಆದರೆ ನೀವು ಜಗತ್ತಿಗೆ ಸೇರಿರುವುದಿಲ್ಲ. ಜಗತ್ತಿನಲ್ಲಿದ್ದು ಕನ್ನಡಿಯಾಗಿ ಸಾಕ್ಷಿಯಾಗಿರಿ. ಪಾರಂಪರಿಕವಾಗಿ ಜ್ಞಾನೋದಯವನ್ನು ಮುಂದುವರಿಸಲು ಅಸಾಧ್ಯ. ಅದು ವ್ಯಕ್ತಿಶಃ ಉಂಟಾಗುವ ಪ್ರಕ್ರಿಯೆ. ಉತ್ತರಾಧಿಕಾರತ್ವದಿಂದ ಅದು ಸಿಗುವುದಿಲ್ಲ. ಪ್ರತಿಯೊಬ್ಬರೂ ಅದಕ್ಕೆ ಪ್ರಯತ್ನಪಟ್ಟು ಸಾಧನೆ ಮಾಡಿ ತನ್ನದೇ ಆದ ರೀತಿಯಲ್ಲಿ ಸಂಪಾದಿಸಬೇಕು ಎಂಬಂತಹ ಸಂದೇಶವನ್ನು ಇ ಕೃತಿ ಸಾರುತ್ತದೆ.

About the Author

ಪ.ರಾ. ಕೃಷ್ಣಮೂರ್ತಿ
(20 July 1951)

ಪ.ರಾ. ಕೃಷ್ಣಮೂರ್ತಿ ಅವರು ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ವಿಭಾಗದ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿಗಳು.ಮೂಲತಃ ಕೋಣಂದೂರಿನ (ಜನನ: 20-07-1951) ನಗರ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರೈಸಿದರು. ಸದ್ಯ, ಸಂಸ್ಕಾರ ಭಾರತಿಯ ಆಗ್ರಾ ಕೇಂದ್ರ ಕಚೇರಿಯಲ್ಲಿದ್ದಾರೆ.  ...

READ MORE

Related Books