ಇರುಳು ಕರಗಿತು ಕಾದಂಬರಿಯನ್ನು ಲೇಖಕಿ ವೈ.ಕೆ. ಸಂಧ್ಯಾಶರ್ಮ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಒಬ್ಬ ಹೆಣ್ಣಿನ ಸ್ವಾರ್ಥ ಯಾವ ಮಟ್ಟಕ್ಕೆ ಕೆಲಸ ಮಾಡುತ್ತದೆ, ಇನ್ನೊಬ್ಬ ಹೆಣ್ಣಿನ ಬಾಳನ್ನು ಹಾಳು ಮಾಡಲೂ ಹೇಸುವುದಿಲ್ಲ ಎಂಬ ಅನೇಕ ಉದಾಹರಣೆಗಳನ್ನು ನಮ್ಮ ಈ ಸಮಾಜದಲ್ಲಿ ಕಾಣಬಹುದು. ಭಾರ್ಗವಿಯಂತಹ ಚಾಲಾಕಿ ಹೆಣ್ಣಿನ ಕೈಗೆ ಸಿಕ್ಕ ದಿವಾಕರ-ಸುಚೇತರ ಬಾಳು ಹೇಹೆ ಹುಲಿಯಾಯಿತು, ಇಂಥ ಸಂದರ್ಭಗಳಲ್ಲಿ ಅವರು ವಿವೇಚನೆಯಿಂದ ಜಾಗೃತರಾದರೇ?, ಇದರಿಂದ ಅವರ ಒಡೆದ ಬಾಳನ್ನು ಸರಿಪಡಿಸಿಕೊಳ್ಲಲಾಯಿತೇ?, ಎಂಬುದಕ್ಕೆ ಸಾಕ್ಷಿ ಇರುಳು ಕರಗಿತು ಕಥಾಚಿತ್ರಣ. ಹೆಣ್ಣಿಗೂ ಕನಸಿಗೂ ಅವಿಭಾಜ್ಯ ನಂಟು. ಕನಸು ಕಾಣುವುದು ತಪ್ಪಲ್ಲ. ಆದರೆ ಅದನ್ನೇ ತಲೆಯ ತುಂಬಾ ತುಂಬಿಕೊಂಡು ವಾಸ್ತವ ಜಗತ್ತಿನ ಬಗ್ಗೆ ಅರಿವಿಲ್ಲದೆ ತಮ್ಮ ಬಾಳನ್ನು ಹಾಳು ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಕನಸಿನ ಬೆನ್ನೇರಿ ಹೊರಟ ಮಧುರ ತನ್ನ ವಯೋಸಹಜವಾದ ಆಸೆ-ಕನಸುಗಳನ್ನು ಕಾಣುತ್ತಾ, ಅದು ಈಡೇರದಾಗ ಭ್ರಮನಿರಸಗೊಂಡು ತಪ್ಪು ಹೆಜ್ಜೆ ಇಡುವಷ್ಟರಲ್ಲಿ ಎಚ್ಚೆಯತ್ತುಕೊಂಡು ಜಾಣ್ಮೆ ತೋರುತ್ತಾಳೆಯೇ ಎಂಬುದರ ಸುತ್ತ ಈ ಕಾದಂಬರಿಯನ್ನು ಹೆಣೆಯಲಾಗಿದೆ.
ಕಳೆದ 52 ವರ್ಷಗಳಿಂದ ಕನ್ನಡ ಸಾರಸ್ವತಲೋಕದಲ್ಲಿ ಜನಪ್ರಿಯ ಲೇಖಕಿಯಾಗಿ ಖ್ಯಾತಿ ಪಡೆದಿರುವ ವೈ.ಕೆ.ಸಂಧ್ಯಾ ಶರ್ಮ ಅವರು ವೈ.ಕೆ. ಕೇಶವಮೂರ್ತಿ ಮತ್ತು ವೈ.ಕೆ. ಅಂಬಾಬಾಯಿಯವರ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಆರಂಭಿಸಿದ ಇವರು, ಬೆಂಗಳೂರಿನ ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಫ್ರೀಲಾನ್ಸ್ ಜರ್ನಲಿಸ್ಟ್ ಆಗಿ ವಿವಿಧ ಪತ್ರಿಕೆಗಳಲ್ಲಿ ನೃತ್ಯ-ನಾಟಕಗಳ ಕಲಾ ವಿಮರ್ಶಕಿಯಾಗಿ, ಅಂಕಣ ಬರಹಗಾರ್ತಿಯಾಗಿ ಕಾರ್ಯನಿರತರಾಗಿದ್ದಾರೆ. ಪ್ರಜಾಮತ ವಾರಪತ್ರಿಕೆ (1975-76) , ಪ್ರಜಾಪ್ರಭುತ್ವ ವಾರಪತ್ರಿಕೆಗಳಲ್ಲಿ (1977-1980) ಮತ್ತು ಇಂಚರ (1980-82) ಮಾಸಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿ ಸೇವೆ ಸಲ್ಲಿಸಿರುವ ಅನುಭವ ಇವರಿಗಿದೆ. ಪ್ರಸ್ತುತ ಅಂತರ್ಜಾಲದ ‘’ ...
READ MORE