‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ಲೇಖನ ಸಂಗ್ರಹ ‘ಇದ್ದದ್ದು ಇದ್ಹಾಂಗ’ ಆಂದೋಲನ ಪತ್ರಿಕೆಯಲ್ಲಿ ಬರೆದ ಅನೇಕ ಲೇಖನಗಳನ್ನು ಒಗ್ಗೂಡಿಸಿ ಈ ಕೃತಿಯನ್ನು ಮಾಡಲಾಗಿದೆ.
ಸುಮಾರು ಐವತ್ತು ವರ್ಷಗಳ ಸುಧೀರ್ಘ ಕಾಲ ಪತ್ರಿಕೋದ್ಯಮಿಯಾಗಿ, ಸಮಾಜವಾದಿಯಾಗಿ, ಶೋಷಿತರ ದನಿಯಾಗಿ, ಕನ್ನಡಪರ ಹೋರಾಟಗಾರರಾಗಿ, ಮಾನವ ಪ್ರೇಮಿಯಾಗಿ ಅವರ ಕೊಡುಗೆ ಅಪಾರ. ಸೌಲಭ್ಯ ಮತ್ತು ಹಣಕಾಸಿನ ಕೊರತೆಯ ನಡುವೆಯೂ ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ, ಸ್ಥಳೀಯ ಸುದ್ದಿಗಳನ್ನು ನೀಡಿ, ಜನರಲ್ಲಿ ವಾಚನಾಭಿರುಚಿಯನ್ನು ಬೆಳೆಸಿದ ಅವರು ನಿಜವಾಗಿಯೂ 'ಜನರ ಪತ್ರಕರ್ತರು'! 1972ರಲ್ಲಿ ಆಂದೋಲನ ಪತ್ರಿಕೆ ಆರಂಭಿಸಿದ್ದರು. ರಾಜಶೇಖರ ಕೋಟಿ ಮೂಲತಃ ಗದಗ್ ಜಿಲ್ಲೆ ಹುಯಿಲಗೋಳದವರು. ಜಮೀನ್ದಾರ್ ಕುಟುಂಬದಲ್ಲಿ ಜನಿಸಿದ್ದ ಇವರು, ಗದಗ್‍ನಲ್ಲಿ ವಿದ್ಯಾಭ್ಯಾಸ ಮುಗಿಸಿ ನಂತರ ಅಚ್ಚು ಮೊಳೆ ಸಹಾಯಕರಾಗಿ ಕೆಲಸ ಆರಂಭಿಸುತ್ತಾರೆ. ಶಾಲಾ ದಿನದಿಂದಲೇ ಪತ್ರಿಕೆ ಬಗ್ಗೆ ಆಸಕ್ತಿ ...
READ MORE