ಹೊನ್ಕಲ್ ಅವರು ಇಂದಿನ ಸಾಮಾಜಿಕ, ಆರ್ಥಿಕ, ರಾಜಕೀಯ, ವ್ಯವಸ್ಥೆಯಲ್ಲಿ ಮಾನವೀಯ ನೆಲೆಗಳು ನಾಶವಾಗುತ್ತಿರುವ ಕಾರಣವನ್ನು ಗಂಭೀರವಾಗಿ ಶೋಧಿಸುವ ಬರಹಗಾರ. ಸುಮಾರು ಇಪ್ಪತೈದು ವರ್ಷಗಳಲ್ಲಿ ಬರೆದ ಬಹು ಮುಖ್ಯ ಕವಿತೆಗಳು ಇಲ್ಲಿವೆ. ಹೊಸ ಹಾಡು ಕವನ ಸಂಕಲನವು ಬಂಡಾಯದ ಧೋರಣೆಯನ್ನು ಹೊಂದಿದ ಕವಿತೆಗಳಾಗಿವೆ. ಈ ಎಲ್ಲಾ ಕವಿತೆಗಳು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಇತರ ಸಮ್ಮೇಳನಗಳಲ್ಲಿ ಬಹುತೇಕ ಜನಮನ್ನಣೆ ಪಡೆದ ಕವಿತೆಗಳು. ನಾಡಿನ ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ಇಲ್ಲಿಯ ಬೇರೆ ಬೇರೆ ಕವಿತೆಗಳು ಪ್ರಕಟಗೊಂಡಿವೆ.
ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು. ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು. ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...
READ MORE