ಹೊರಳು ಹಾದಿ

Author : ಎಂ.ಎಸ್. ಶೇಖರ್

Pages 154

₹ 160.00




Year of Publication: 2021
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113
Phone: 9840354507

Synopsys

ಲೇಖಕ ಎಂ.ಎಸ್.ಶೇಖರ್ ಅವರ ಲೇಖನಗಳ ಸಂಕಲನ ‘ಹೊರಳು ಹಾದಿ’. ಈ ಕೃತಿಗೆ ಮಹಾದೇವ ಶಂಕನಪುರ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ‘ಎಂ.ಎಸ್.ಶೇಖರ್ ಅವರು ಈ ಕೃತಿಯ ಮೂಲಕ ಮುಖ್ಯವಾಹಿನಿ ಎಂಬ ಕನ್ನಡ ಸಾಹಿತ್ಯದ ನದಿಯ ಅರಿವಿಗೆ ತಂದಿದ್ದಾರೆ. ದಲಿತರು ಇತಿಹಾಸದ ಪುಟಗಳಲ್ಲಿ ಎಲ್ಲೂ ಇಲ್ಲ, ಅವರಿಗೆ ಇತಿಹಾಸವೂ ಇಲ್ಲ ಎಂದುಕೊಂಡವರಿಗೆ ಇತಿಹಾಸ ನಿರ್ಮಿಸಿದ ದಲಿತ ಲೇಖಕರ ಕುರಿತು ಸಂಶೋಧನೆ ಮಾಡಿ ದಾಖಲೆ ಸಮೇತ ಅವರು ಈ ಕೃತಿಯ ಮೂಲಕ ಉತ್ತರ ನೀಡಿದ್ದಾರೆ. ಕುವೆಂಪು, ಬೇಂದ್ರೆ, ಬಿ.ಎಂ.ಶ್ರೀ, ಮಾಸ್ತಿ ಮೊದಲಾದ ಹಿರಿಯ ಸಾಹಿತಿಗಳ ಹಾಗೆ ಕನ್ನಡ ಸಾಹಿತ್ಯಕ್ಕೆ ಆಗಿನಿಂದಲೂ ಸಾಧ್ಯವಾದಷ್ಟೂ ದಲಿತ ಲೇಖಕರ ಕೊಡುಗೆ ಕೂಡ ಇರುವುದನ್ನು ಈ ಕೃತಿ ಹೇಳುತ್ತದೆ ಎಂದು ಅವರು ಹೇಳಿದ್ದಾರೆ.

About the Author

ಎಂ.ಎಸ್. ಶೇಖರ್

ಸಂಶೋಧಕ, ಕವಿ, ಬರಹಗಾರ ಡಾ.ಎಂ.ಎಸ್.ಶೇಖರ್ ಅವರು 1964 ರಲ್ಲಿ ಹಾಸನ ಜಿಲ್ಲೆಯ ಹಾಸನ ತಾಲೂಕಿನ ಮಲ್ಲಿಗೆವಾಳು ಗ್ರಾಮದಲ್ಲಿ ಜನಿಸಿದರು. ತಂದೆ ಸಿದ್ದಯ್ಯ, ತಾಯಿ ದೇವಮ್ಮ. ಆಲೂರು, ಹಾಸನದಲ್ಲಿ ಪ್ರಾಥಮಿಕದಿಂದ ಪದವಿವರೆಗೂ ಶಿಕ್ಷಣ ಪೂರೈಸಿದರು.  ಮೈಸೂರು ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ ಪದವೀಧರರಾದರು. 1992 ರಲ್ಲಿ ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಉಪನ್ಯಾಸಕರಾದರು. 1994 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಿಂದ ಪಿ.ಎಚ್.ಡಿ ಪಡೆದರು. ಮಂಡ್ಯದ ಸರ್.ಎಂ.ವಿ ಸ್ನಾತಕೋತ್ತರ ಕೇಂದ್ರದ ಸಂಯೋಜಕರಾಗಿ ಹಾಗೂ ಮುಖ್ಯಸ್ಥರಾಗಿ (2010 ರಿಂದ 2012) ನಂತರ ಹಾಸನದ ಹೇಮಗಂಗೋತ್ರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: 1997 ರಲ್ಲಿ ...

READ MORE

Related Books