ಡಾ. ಕೆ. ಷರೀಫಾ ಹಾಗೂ ಯಮುನಾ ಗಾಂವ್ಕರ್ ಅವರು ಸಂಪಾದಿಸಿದ ರೈತ ಆಂದೋಳನದ ಕವಿತೆಗಳು-ಹೊನ್ನಾರು ಒಕ್ಕಲು. ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆ ಅವರು ಕೃತಿಗೆ ಬೆನ್ನುಡಿ ಬರೆದು ‘ಇಲ್ಲಿನ ಎಲ್ಲ ಕವಿತೆಗಳಲ್ಲಿ ಕಂಡು ಬರುವ ಸಾಮಾನ್ಯ ಅಂಶವೆಂದರೆ ಭಾರತೀಯ ರೈತ ನಿಜಕ್ಕೂ ಬಡವ ಮತ್ತು ಶೋಷಿತ. ಅವನಿಗೆ ತನ್ನದೇ ಜಮೀನಿಲ್ಲ. ಆದರೆ, ಅವನ ಜೀವನವು ಜಮೀನಿನಲ್ಲಿಯೇ ಕಳೆದು ಹೋಗುತ್ತದೆ. ಈ ಕುರಿತು ಅವನಲ್ಲಿಯೂ ತಿಳಿವಳಿಕೆ ಹುಟ್ಟಬೇಕು. ಇತರರಲ್ಲಿಯೂ ಅರಿವು ಮೂಡಬೇಕು. ಸದ್ಯಕ್ಕೆ ಅವನಲ್ಲಿ ಒಂದು ಎಚ್ಚರ ಮೂಡಿದೆ. ನ್ಯಾಯಕ್ಕಾಗಿ ಆತ ಹೋರಾಡುತ್ತಿದ್ದಾನೆ. ಅವನ ಜೊತೆ ನಿಲ್ಲಬೇಕಾದದ್ದು ಸಂವೇದನಾಶೀಲರ ಕರ್ತವ್ಯ’ ಎಂದು ಇಲ್ಲಿಯ ಕವಿತೆಗಳ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರಶಂಸಿಸಿದ್ದಾರೆ.
ಲೇಖಕಿ ಕೆ.ಷರೀಫಾ ಅವರು 1957 ಮೇ 05ರಂದು ಗುಲಬರ್ಗಾದಲ್ಲಿ ಜನಿಸಿದರು. ತಂದೆ ಬಾಬುಮಿಯಾ, ತಾಯಿ ಪುತಲೀಬೇಗಂ. ಬಿಡುಗಡೆಯ ಕವಿತೆಗಳು, ನೂರೇನ್ಳ ಅಂತರಂಗ, ಪಾಂಚಾಲಿ, ಮುಮ್ರಾಜಳ ಮಹಲು, ಬುರ್ಖಾ ಪ್ಯಾರಡೈಸ್, ಸಂವೇದನೆ (ವಿಮರ್ಶೆ), ಮಹಿಳಾ ಮಾರ್ಗ (ಸಹ ಸಂಪಾದನೆ), ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳಾ ಸಂವೇದನೆ (ಸಂಶೋಧನೆ), ಹೊಸ ಶತಮಾನದ ಕಾವ್ಯ (ಸಂಪಾದನೆ) ಅವರ ಪ್ರಕಟಿತ ಕೃತಿಗಳು. ಅವರಿಗೆ ಮಹಿಳೆ ಮತ್ತು ಸಮಾಜ ಪ್ರಶಸ್ತಿ, ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಶ್ರೀ ಪ್ರಶಸ್ತಿ, 2019ನೇ ಸಾಲಿನ ಕ.ಸಾ.ಪದ ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿ ದೊರೆತಿದೆ. ...
READ MORE