ಸಾಮಾಜಿಕ, ಆರ್ಥಿಕ ಅಸಮಾನತೆಗಳು ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಚಾರಿತ್ರಿಕವಾಗಿ ಹುಟ್ಟುಹಾಕಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆಗೆ ಕೇವಲ ಸಮಕಾಲೀನವಾದ ಹಿನ್ನೆಲೆ ಮಾತ್ರವಿರದೆ ಅದಕ್ಕೆ ಚಾರಿತ್ರಿಕವಾದ ಮತ್ತು ಆರ್ಥಿಕವಾದ ಕಾರಣಗಳೂ ಹಿನ್ನೆಲೆಯಾಗಿರುತ್ತವೆ. ಅದರ ಬೆಳಕಿನಲ್ಲಿ ಆಯಾ ಸಮಸ್ಯೆಗಳ ಸ್ವರೂಪವನ್ನು ಅರಿಯಬಹುದು ಎಂಬುದು ಇಲ್ಲಿನ ಬರವಣಿಗೆಯ ಹಿಂದಿರುವ ಸಾಮಾನ್ಯ ಇಂಗಿತವಾಗಿದೆ. ಊಳಿಗಮಾನ್ಯ ಶಾಹಿ, ಸಾಮ್ರಾಜ್ಯಶಾಹಿ ಮತ್ತು ಯಜಮಾನಿಕೆಯ ಪ್ರಭುತ್ವಗಳು, ವ್ಯವಸ್ಥೆಯ ಅಸಮಾನತೆ ಮತ್ತು ಶೋಷಣೆಯ ರೂಪಗಳನ್ನು ನಿರಂತರವಾಗಿ ಮುಂದುವರೆಸುತ್ತಿವೆ.
ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಇಂತಹ ಅಸಮಾನತೆಗಳನ್ನು ವಿರೋಧಿಸುವಂತಹ ಆಲೋಚನೆಗಳು ಮತ್ತು ಕೆಲವು ಹೋರಾಟಗಳು ನಡೆವಾಗಲೂ, ಅವು ಅನೇಕ ಬಾರಿಸಮಸ್ಯೆಯ ಆಳವನ್ನು ಕೇಂದ್ರೀಕರಿಸಲಿಲ್ಲ ಎಂಬ ಅಸಮಾಧಾನದ ಮಾತುಗಳೂ ಇದರಲ್ಲಿ ಬಂದಿವೆ. ರೈತಸಂಘ ಊಳಿಗಮಾನ್ಯ ಶಾಹಿಯನ್ನು ಮತ್ತು ಭೂಮಿಯ ಒಡೆತನದ ಪ್ರಶ್ನೆಯನ್ನು ಎತ್ತಿಕೊಳ್ಳಲಿಲ್ಲ ಎಂಬ ಹೇಳಿಕೆಗಳನ್ನು ಇಲ್ಲಿಯ ಬರವಣಿಗೆಗಳಲ್ಲಿ ಕಾಣಬಹುದಾಗಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದವರಾದ ಐ.ಜೆ.ಮ್ಯಾಗೇರಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕಾರಾಗೃಹ ಇಲಾಖೆಯಲ್ಲಿ ಉಪ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಸಾಹತುಶಾಹಿ ಅನುಭವ ಮತ್ತು ಕನ್ನಡ ಕಾದಂಬರಿಗಳು ಇವರು ಬರೆದ ಪುಸ್ತಕ. ...
READ MORE