ಹಿಜಾಬ್ ಕಾದಂಬರಿಯಲ್ಲಿ ವೈದ್ಯರ ತಂಡವೊಂದು ಗ್ರೀನ್‌ಕಾರ್ಡ್‌ಗಾಗಿ ಎಂಥ ವಾತಾವರಣದಲ್ಲೂ ಬದುಕುವ ನಿರ್ಧಾರ ತೆಗೆದುಕೊಳ್ಳುತ್ತದೆ. ಐದು ವರ್ಷಗಳ ಗ್ರಾಮೀಣ ಸೇವೆ ಅಮೆರಿಕದಲ್ಲಿ ಕಡ್ಡಾಯವಾಗಿರುವುದರಿಂದ ಅವರಿಗೆ ಅನ್ಯ ಮಾರ್ಗವಿರುವುದಿಲ್ಲ. ಗುರು, ರಾಧಿಕಾ ಹಾಗೂ ಶ್ರೀಕಾಂತ್ ಇವರೆಲ್ಲರ ಬದುಕು, ಆಸ್ಪತ್ರೆ ಜೊತೆಗೆ ಸೊಮಾಲಿಯಾದ ಮುಸ್ಲಿಂ ಮಹಿಳೆಯರ ಸಮಸ್ಯೆಯೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಸೊಮಾಲಿಯಾ ಮಹಿಳೆಯರಲ್ಲಿಯೂ ಜಾರಿಯಲ್ಲಿರುವ ಸುನ್ನತಿ ಪದ್ಧತಿ, ಯೋನಿಬಂಧ ಪದ್ಧತಿಗಳೆರಡನ್ನೂ ಚರ್ಚಿಸುತ್ತಲೇ ಮಹಿಳೆಯರು, ತಾಯ್ತನ ಹಾಗೂ ಧರ್ಮ ಮತ್ತು ಕರ್ತವ್ಯಗಳ ನಡುವಿನ ಜಿಜ್ಞಾಸೆ ಕಾದಂಬರಿಯುದ್ದಕ್ಕೂ ತಣ್ಣಗೆ ಇರಿಯುತ್ತಲೇ ಇರುತ್ತದೆ. ಜೊತೆಗೆ ಪರಸ್ಪರ ಅವಲಂಬನೆ, ಸಾಂಗತ್ಯ, ಆತ್ಮೀಯತೆ ಇಂಥ ಸಾಮಾನ್ಯ ಗುಣಗಳೂ ಇಲ್ಲಿ ಸುಳಿಗಾಳಿಯಂತೆ ಸುತ್ತುತ್ತಲೇ ಇರುತ್ತವೆ. ಹೆರಿಗೆಯೊಂದರ ಲೈವ್ ವೃತ್ತಾಂತ, ಅವರ ವಿಚಾರಣೆ ಇವೆಲ್ಲವೂ ಇರಾನಿ ಸಿನಿಮಾವೊಂದರ ಒತ್ತಡವನ್ನೇ ಸೃಷ್ಟಿಸುತ್ತವೆ.
ಗುರುಪ್ರಸಾದ್ ಕಾಗಿನೆಲೆ ಅವರು ಹುಟ್ಟಿದ್ದು ಶಿವಮೊಗ್ಗದಲ್ಲಿ, ಬೆಳೆದದ್ದು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ. ಬಳ್ಳಾರಿಯ ಸರಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ. ಡೆಟ್ರಾನ್ಸ್‌ನ ವೇಯ್ಡ್ ಸ್ಟೇಟ್ ವಿಶ್ವವಿದ್ಯಾನಿಲಯ ಹಾಗೂ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ. ಸದ್ಯಕ್ಕೆ ಮಿನೆಸೊಟಾ ರಾಜ್ಯದ ರಾಚೆಸ್ಟರ್‌ನಲ್ಲಿ ವಾಸ, ನಾರ್ತ್ ಮೆಮೊರಿಯಲ್ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪ್ರಕಟಿತ ಕೃತಿಗಳು: 'ನಿರ್ಗುಣ' ಕಥಾಸಂಕಲನ, 'ವೈದ್ಯ, ಮತ್ತೊಬ್ಬ' ಲೇಖನ ಸಂಗ್ರಹ ಮತ್ತು 'ಗುಣ' ಕಾದಂಬರಿ, ಸಂಪಾದಿತ ಕಥಾಸಂಕಲನ 'ಆಚೀಚೆಯ ಕಥೆಗಳು'. ಇತ್ತೀಚಿನ ಕಾದಂಬರಿ 'ಹಿಜಾಬ್ ಸೇರಿದಂತೆ ಹಲವಾರು ...
READ MOREಹಿಜಾಬ್ ಕಾದಂಬರಿ ಕುರಿತು- ಗುರು ಪ್ರಸಾದ್ ಕಾಗಿನೆಲೆ
ಕಾದಂಬರಿ-2017