ಲೇಖಕರಾದ ನ. ರವಿಕುಮಾರ ಹಾಗೂ ಅಸಿತಾ ಪ್ರಭುಶಂಕರ ಅವರು ಜಂಟಿಯಾಗಿ ಸಂಪಾದಿಸಿದ ಕೃತಿ-ಹೀಗಿದ್ದರು ಪ್ರಭುಶಂಕರ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಪ್ರಭುಶಂಕರ, ಕವಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ‘ಕನ್ನಡದಲ್ಲಿ ಭಾವಗೀತೆಗಳು’ ವಿಷಯವಾಗಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಅಂಗುಲೀಮಾಲ, ಆಮ್ರಪಾಲಿ, ಖಲೀಲ್ ಗಿಬ್ರಾನ್, ಕಾವ್ಯಯೋಗ, ಅಮೆರಿಕದಲ್ಲಿ ನಾನು ಶಾಂತಿ, ನಿವೇದಿತಾ, ಜನ-ಮನ, ಚಿಂತೆ-ಚಿಂತನೆ, ಮಂದಹಾಸ ಮೀಮಾಂಸೆ ಇತ್ಯಾದಿ. ಕೃತಿಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಪ್ರಭುಶಂಕರ ಅವರ ಒಡನಾಡಿ ವಿದ್ವಾಂಸರಿಂದ, ಅಭಿಮಾನಿಗಳಿಂದ ಲೇಖನಗಳನ್ನು ತರಿಸಿಕೊಂಡು ಸಂಪಾದಿಸಿದ ಕೃತಿ ಇದು. ಪ್ರಭುಶಂಕರ ಅವರ ಘನವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಇಲ್ಲಿಯ ಬರಹಗಳು ತೋರುತ್ತವೆ.
ನ. ರವಿಕುಮಾರ್ ಅವರು ಮೂಲತಃ ತುಮಕೂರಿನವರು. ಕುಣಿಗಲ್ ತಾಲೋಕಿನ ಪುಟ್ಟಯ್ಯನಪಾಳ್ಯ, ಹಾಲಶೆಟ್ಟಿಹಳ್ಳಿ, ಕೆಂಪಸಾಗರ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು, ಎಸ್.ಕೆ. ಎಫ್. ಬೇರೀಂಗ್ಸ್ ಕಾರ್ಖಾನೆಯಲ್ಲಿ 25 ವರ್ಷಗಳ ದುಡಿದಿದ್ದಾರೆ. ಆನಂತರ ‘ಅಭಿನವ’ ಪ್ರಕಾಶನವನ್ನು ಆರಂಭಿಸಿ ಆ ಮೂಲಕ ವಿವಿಧ ಲೇಖಕರ 500ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹಾಗೂ ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಉಪನಿಷತ್ತು(2018), ಮಕ್ಕಳಿಗಾಗಿ ಕೆ.ಎಸ್ . ನರಸಿಂಹಸ್ವಾಮಿ, ಆಯ್ದ ವಿಮರ್ಶೆಗಳು, ದೇವರ ಗೊಡವೆ ಕೂಡಾ ನನಗೆ ಬೇಡ, ಮನುಕುಲದ ಮಾತುಗಾರ, ಮಾತು ತಲೆ ಎತ್ತಿದ ಬಗೆ ಅವರ ಪ್ರಕಟಿತ ಕೃತಿಗಳು. ಕರ್ನಾಟಕ ಪ್ರಕಾಶಕರ ...
READ MORE