‘ಹೆತ್ತ ತಾಯಿಯ ನೆನೆದು’ ಲೇಖಕ ಡಾ.ಸಿ. ನಾಗಣ್ಣ ಅವರು ಜಗತ್ತಿನ ಪ್ರಸಿದ್ಧ ಮಹಿಳೆಯರ ಕುರಿತು ಬರೆದ ಲೇಖನ ಸಂಕಲನ. ಈ ಕೃತಿಗೆ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರು ಬೆನ್ನುಡಿ ಬರೆದಿದ್ದಾರೆ. ಡಾ.ಸಿ. ನಾಗಣ್ಣನವರು ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದವರು. ಇಂಗ್ಲಿಷ್-ಕನ್ನಡ ಸಾಹಿತ್ಯದ ಜ್ಞಾನಸೇತುವಾಗಿ ಅನೇಕ ಕೃತಿಗಳನ್ನು ಅನುವಾದದ ಮೂಲಕ ಕನ್ನಡದಿಂದ ಇಂಗ್ಲಿಷ್, ಇಂಗ್ಲೀಷಿನಿಂದ ಕನ್ನಡಕ್ಕೆ ತಂದು ಕನ್ನಡದ ಅಸ್ಮಿತೆಯನ್ನು ಮೆರೆದವರು. ಆಫ್ರಿಕನ್ ಸಾಹಿತ್ಯದ ಬಗ್ಗೆ ವಿಶೇಷ ಪರಿಣಿತಿಯನ್ನು ಪಡೆದ ಅವರು ಆ ಸೊಗಡನ್ನು ಕನ್ನಡಕ್ಕೂ ತಂದು ಶ್ರೀಮಂತಗೊಳಿಸಿದವರು. ಹೆತ್ತ ತಾಯಿಯನ್ನು ನೆಪವಾಗಿ ಇಟ್ಟುಕೊಂಡು ಇಡೀ ಸ್ತ್ರೀ ಸಂಕುಲದ ಸಿದ್ಧಿ ಸಾಧನೆಗಳನ್ನು, ನೋವು ನಲಿವುಗಳನ್ನು, ಪುರುಷ ಜಗತ್ತಿನ ಪಾರಮ್ಯದ ನಡುವೆ ಹೋರಾಟದ ಮೂಲಕ ಚರಿತ್ರೆಯನ್ನು ಸೃಷ್ಟಿಸಿದ ಅನನ್ಯ ಸಾಧಕಿಯರ ಒಂದು ಬೃಹತ್ ಚಿತ್ರವನ್ನು ಅನಾವರಣ ಮಾಡುವಲ್ಲಿ ನಾಗಣ್ಣನವರ ಕರುಳ ಪ್ರೀತಿಯ ಬರವಣಿಗೆ ಗಮನ ಸೆಳೆಯುತ್ತದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...
READ MORE