‘ಹದ್ದುಗಳು’ ಲೇಖಕ ಆರ್.ವಿ. ಭಂಡಾರಿ ಅವರ ಕವನ ಸಂಕಲನ. ಈ ಕೃತಿಯ ಕುರಿತು ಬರೆಯುತ್ತಾ ಹದ್ದುಗಳು ನನ್ನ ಮೂರನೆಯ ಕವನ ಸಂಕಲನ. ಎರಡನೆಯ ಸಂಕಲನ ಕೊನೆಗಾರನ ಪತ್ತೆಯಾಗಲಿಲ್ಲ ಪ್ರಕಟವಾದುದು 1981ರಲ್ಲಿ . ಇದೀಗ ಇಪ್ಪತ್ತು ವರ್ಷಗಳ ನಂತರ ಹದ್ದುಗಳು ಪ್ರಕಟವಾಗುತ್ತಿದೆ. ಇಷ್ಟು ವರ್ಷಗಳ ಅವಧಿಯಲ್ಲಿಯು ಕವನಗಳ ಸಂಖ್ಯೆ ಅಷ್ಟೇನೂ ಇಲ್ಲ. ಬೇರೆ ಬರಹಗಳ ಮಧ್ಯೆಯೂ ಕವನ ಬರೆಯಬೇಕೆಂಬ ಅನಿಸಿಕೆಯನ್ನು ಒತ್ತೊತ್ತಿ ಇಟ್ಟರೂ ಆಗಾಗ ಬರೆದ ಕವನಗಳಲ್ಲಿ ಕೆಲವನ್ನು ಆರಿಸಿ ಇಲ್ಲಿ ಪ್ರಕಟಣೆಗೆ ಮುಂದಾಗಿದ್ದೇನೆ ಎಂದಿದ್ದಾರೆ ಲೇಖಕ ಆರ್.ವಿ. ಭಂಡಾರಿ. ಹಾಗೇ ಇಲ್ಲಿಯ ಕವನಗಳನ್ನು ಸಂಕ್ರಮಣ, ಅನ್ವೇಷಣೆ, ಸಾಹಿತ್ಯ ಅಕಾಡೆಮಿ ವಾರ್ಷಿಕ, ದಸರಾ ಸಂಕಲನ, ಬರ ಸಂಕಲನ, ಜನ ಮಾಧ್ಯಮ, ಕರಾವಳಿ ಮುಂಜಾವು, ಸಕಾಲಿಕ ಮುಂತಾದ ಸಂಗ್ರಹ ಮತ್ತು ಪತ್ರಿಕೆಗಳು ಪ್ರಕಟಿಸಿವೆ. ಅವರಿಗೆ ಕೃತಜ್ಞತೆಯನ್ನು ಅರ್ಪಿಸಿದ್ದಾರೆ.
ಸಾಹಿತಿ ಆರ್.ವಿ. ಭಂಡಾರಿ ಅವರು ಜನಿಸಿದ್ದು 1936 ಮೇ 5ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಇವರ ಹುಟ್ಟೂರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಹೂವಿನೊಡನೆ ಮಾತುಕತೆ, ಸುಭಾಷ್ಚಂದ್ರ ...
READ MORE