ಗುಣವೆಂಬುದೇ ಒಗಟು

Author : ಸಿ. ನಾಗಣ್ಣ

Pages 124

₹ 90.00




Year of Publication: 2004
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ.70, 2ನೇ ಮುಖ್ಯರಸ್ತೆ, ಜಬ್ಬರ್ ಬ್ಲಾಕ್, ವೈಯ್ಯಾಲಿಕಾವಲ್, ಬೆಂಗಳೂರು- 560003
Phone: 08023313400

Synopsys

ಕುವೆಂಪು, ಚಂದ್ರಶೇಖರ ಕಂಬಾರ, ವೀಚಿ, ಹಂಪನಾ ಕುರಿತ 15 ಲೇಖನಗಳನ್ನುಒಳಗೊಂಡ ಕೃತಿ-ಗುಣವೆಂಬುದೇ ಒಗಟು.  ಕುವೆಂಪು ಮತ್ತು ಪುಷ್ಟಜಗತ್ತು, ಕುವೆಂಪು ಮತ್ತು ವಸಾಹತುಶಾಹಿ ದರ್ಭ, ಕುವೆಂಪು ಮತ್ತು ಬೇಂದ್ರೆ, ಕುವೆಂಪು ಮತ್ತು ಟಾಲ್‌ಸ್ಟಾಯ್’, ಮಲೆನಾಡಿನ ಚಿತ್ರಗಳು ಹಾಗೂ ಕುವೆಂಪು ವ್ಯಕ್ತಿತ್ವ, ಹಂಪನಾ ಅವರ ಚಾರುವಸಂತ, ಕಂಬಾರರ “ಚಕೋರಿ”ಯಲ್ಲಿ ಯುಗಳ ಚೈತನ್ಯ, ವೀಚಿ ಸಮಗ್ರ ಕಾವ್ಯ:ಒಂದು ಓದು, ವೀಚಿ ಅವರ ಕಾವ್ಯದಲ್ಲಿ ಮಕ್ಕಳ ಲೋಕ, ಜಾಗತಿಕ ಮಹಿಳಾ ಅನುಭಾವಿಗಳು, ಸಮಕಾಲೀನ ಆಫ್ರಿಕನ್ ಕಾವ್ಯ, ಎಮಿಲಿ ಡಿಕಿನ್ಸನ್ : ಕಲೆ ಮತ್ತು ಅಂತರಂಗದ ಬದುಕು, ಎಮಿಲಿ ಡಿಕಿನ್ಸನ್‌ಳ ಕಾವ್ಯದಲ್ಲಿ ನಿಶ್ಚಲ ಕೇಂದ್ರ, ಏಟ್ಸ್ ಕವಿಯ ಚೈತನ್ಯದ ಹುಡುಕಾಟ, ಅರಬೀ ಅನುಭಾವೀ ಖಲೀಲ್ ಜಿಬ್ರಾನರ ಪತ್ರಗಳು ಹೀಗೆ ವಿವಿಧ ಲೇಖನಗಳನ್ನು ಲೇಖಕ ಸಿ. ನಾಗಣ್ಣ ಅವರು ಈ ಕೃತಿಯಲ್ಲಿ ಸಂಕಲಿಸಿದ್ದಾರೆ. 

About the Author

ಸಿ. ನಾಗಣ್ಣ

ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...

READ MORE

Related Books