ಜ್ನಾನಪೀಠ ಪ್ರಶಸ್ತಿ ಪುರಸ್ಕೃತಿ ಡಾ. ಯು.ಆರ್. ಅನಂತಮೂರ್ತಿ ಅವರ ಕಾದಂಬರಿ. -ಘಟಶ್ರಾದ್ಧ. ಸನಾತನ ಸಂಪ್ರದಾಯ ಹಾಗೂ ಆಧುನಿಕ ಬದಲಾವಣೇ ಮಧ್ಯೆ ಎದುರಾಗುವ ಸಂಘರ್ಷವೇ ಇಲ್ಲಿಯ ಕಥಾವಸ್ತು. ವಿಧವೆ ಬಾಲೆಯೇ ಇಲ್ಲಿಯ ನಾಯಕಿ. ಈ ಕಾದಂಬರಿಯು ಚಲನಚಿತ್ರವಾಗಿದ್ದು, ಗಿರೀಶ ಕಾಸರವಳ್ಳಿ ಚಿತ್ರಕಥೆ ನಿರ್ದೇಶಿಸಿದ್ದರೆ, ಬಿ.ವಿ. ವೈಕುಂಠರಾಜು ಕಾದಂಬರಿಯನ್ನು ವಿಮರ್ಶಿಸಿದ್ದಾರೆ. ಕಥೆ-ಚಿತ್ರಕಥೆ ಹಾಗೂ ವಿಮರ್ಶೆ-ಈ ಮೂರನ್ನು ಒಂದೇ ಕೃತಿಯಲ್ಲಿ ಕಟ್ಟಿಕೊಡಲಾಗಿದೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MOREGhatashraddha- 1978 Kannada Cinema