‘ಘಾಂದ್ರುಕ್’ ಪತ್ರಕರ್ತ, ಲೇಖಕ ಸತೀಶ್ ಚಪ್ಪರಿಕೆ ಅವರ ಕಾದಂಬರಿ. ಪೂರ್ವ ಪಶ್ಚಿಮಗಳ ಸಂಗಮವಾಗಿರುವ ಈ ಕಾದಂಬರಿ, ಬದುಕೆಂಬ ಮಾಯಾಲೋಕದಲ್ಲಿ ಎಂದೆಂದಿಗೂ ಮುಗಿಯದ ಹುಡುಕಾಟವೊಂದರ ಬೆನ್ನತ್ತಿ ಸಾಗುತ್ತದೆ. ಈ ಕೃತಿಯ ಕುರಿತು ಬರೆದಿರುವ ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥರಾವ್ ಅವರು 'ಫಾಂದ್ರುಕ್’ ನಮ್ಮಲ್ಲಿ ತೀವ್ರ ಆಸಕ್ತಿ ಹುಟ್ಟಿಸುವುದು ಅದರ ಭೌಗೋಳಿಕ ವಿಸ್ತಾರ ಮತ್ತು ಮಾನವೀಯ ಸಂಬಂಧಗಳ ಆಕರ್ಷಣೆಯಿಂದಾಗಿ ಎಂದಿದ್ದಾರೆ. ಹಾಗೆ ‘ನಮ್ಮ ದಕ್ಷಿಣ ಕನ್ನಡದಿಂದ ಹಿಡಿದು ಹಿಮಾಲಯದ ತಪ್ಪಲು, ನೇಪಾಳ, ಅಲ್ಲಿನ `ಫಾಂದ್ರುಕ್’ ಎಂಬ ಹಳ್ಳಿ , ಅನ್ನಪೂರ್ಣ ಶಿಖರ, ಗಂಡಕಿ ನದಿ – ಹೀಗೆ ಪ್ರಕೃತಿ, ಸೃಷ್ಟಿ ಮತ್ತು ಮಾನವ ಬದುಕಿನ ಗತ, ಲಯಗಳು ಒಂದರೊಳಗೊಂದು ಬೆಸೆದುಕೊಂಡು ಅನಾವರಣಗೊಳ್ಳುವ ಈ ಕಾದಂಬರಿಯ ಕಥನದಲ್ಲಿ ಒಂದಕ್ಕಿಂತ ಹೆಚ್ಚು ಆಯಾಮಗಳಿವೆ. ಈ ಕಾದಂಬರಿಯ ಮೂಲ ಮೌಲ್ಯಗಳು ಚಿಂತನೆ ಇರುವುದು ನೇಪಾಳವೂ ಸೇರಿದಂತೆ, ಭಾರತೀಯ ಸಂಸ್ಕೃತಿಯಲ್ಲೇ. ಇದಕ್ಕೆ ಆಧುನಿಕ ಯುಗದಲ್ಲಿ ಮೂಡಿರುವ ಆಯಾಮಗಳು ಈ ಬದುಕನ್ನು ಹೆಚ್ಚು ಸಂಕೀರ್ಣಗೊಳಿಸಿವೆ. ಚಿಂತನೆಯಲ್ಲಿ ಸ್ವಲ್ಪ ಗೊಂದಲ ಅರಾಜಕತೆಗಳಿಗೆಡೆ ಮಾಡಿಕೊಟ್ಟಿವೆ. ಹೊಸ ಆಯಾಮಗಳನ್ನೊಳಗೊಂಡ ವರ್ತಮಾನದ ಆಧುನಿಕ ಬದುಕಿನ ಶೋಧವೇ ಕಾದಂಬರಿಯ ಧ್ಯೇಯ ಉದ್ದೇಶಗಳು ಎಂದೇ ಇದನ್ನು ನವ್ಯೋತ್ತರ `ನವ್ಯ’ ಕಾದಂಬರಿ ಎಂದು ಕರೆಯಬಹುದೇನೋ ಎಂದಿದ್ದಾರೆ.
ಪತ್ರಕರ್ತ, ಲೇಖಕ, ಕಾದಂಬರಿಕಾರ ಸತೀಶ್ ಚಪ್ಪರಿಕೆ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಚಪ್ಪರಿಕೆಯವರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಅವರು, ತಂದೆಯ ಹೋಟೆಲ್ ಉದ್ಯಮದಿಂದ ಬೆಂಗಳೂರಿಗೆ ಬಂದು ನೆಲಸಿದರು. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ‘ಬ್ರಿಟಿಷ್ ಶಿವ್ನಿಂಗ್ ಸ್ಕಾಲರ್ಷಿಪ್’ ಪಡೆದ ಏಕೈಕ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸತೀಶ್ ಲಂಡನ್ನ ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಉನ್ನತ ವ್ಯಾಸಂಗ ಮಾಡಿದ್ದಾರೆ. ಸಸ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೇವಲ ಬರವಣಿಗೆಯ ಶಕ್ತಿಯಿಂದಲೇ ‘ಪ್ರಜಾವಾಣಿ’ ದಿನಪತ್ರಿಕೆ ಸೇರಿ, ಅಲ್ಲಿ ಪತ್ರಕರ್ತ ಜೀವನ ಆರಂಭಿಸಿದ ಅವರು ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಸೇವೆ ...
READ MORE