ಲೇಖಕ ಲಕ್ಷ್ಮಣ ವಿ ಎ ಅವರ ’ಗರ್ದಿ ಗಮ್ಮತ್ತು ನೋಡ..ss ಗೋಳ ಗುಮ್ಮಟ ನೋಡ..ss’ ಲೇಖನಗಳ ಸಂಕಲನ. ಕೃತಿಗೆ ಬೆನ್ನುಡಿ ಬರೆದ ವಿದ್ಯಾರಶ್ಮಿ ಪೆಲತ್ತಡ್ಕ , ’ಇದೊಂದು ಕನ್ನಡಿ, ಇಂದಿನ ವ್ಯವಸ್ಥೆ, ಬದುಕಿನ ರೀತಿನೀತಿ, ನಾವು ಹಾಕಿಕೊಂಡಿರುವ ಮುಖವಾಡ ಎಲ್ಲವನ್ನೂ ಈ ಕೃತಿ ಪ್ರತಿಫಲಿಸಿದೆ. ನಮ್ಮನ್ನು ನಾವು ತಿದ್ದಿಕೊಳ್ಳಬೇಕಾದ ಎಲ್ಲ ಅಂಕುಡೊಂಕುಗಳೂ ಇಲ್ಲಿನ ಅಕ್ಷರಗಳಲ್ಲಿವೆ. ಸುವಿಚಾರಗಳ ಸರಣಿ, ಪ್ರತಿ ಲೇಖನದಲ್ಲಿಯೂ ನಾವೆಲ್ಲರೂ ಯೋಚಿಸಬೇಕಾದ ಗಹನವಾದ ವಿಚಾರಗಳಿವೆ. ಓದುತ್ತ ಓದುತ್ತ ಓದುಗರಲ್ಲಿ ಚಿಂತನೆಗೆ ಹಚ್ಚುವ ಈ ವಸ್ತುಗಳು ನಮ್ಮಲ್ಲಿಯೂ ಮುಂದುವರಿಯುತ್ತವೆ ’ ಎಂದು ಪ್ರಶಂಸಿದ್ದಾರೆ.
ಡಾ. ಲಕ್ಷ್ಮಣ ವಿ.ಎ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಓದು, ಬರಹವನ್ನು ಹವ್ಯಾಸವಾಗಿಸಿಕೊಂಡಿರುವ ಲಕ್ಷ್ಮಣ್ ಅವರು ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ ಎಂಬ ಕವನ ಸಂಕಲವನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗೀ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಅಪ್ಪನ ಅಂಗಿ’ ಅವರ ಇತ್ತಿಚಿನ ಕೃತಿ. ...
READ MORE