’ಗಂಧವತೀ ಪೃಥ್ವೀ’ ಹಿರಿಯ ಸಾಹಿತಿ ದೊಡ್ಡರಂಗೇಗೌಡ ಅವರ ಕವಿತೆಗಳ ಸಂಕಲನ. “ ದೊಡ್ಡರಂಗೇಗೌಡರ ಕಾವ್ಯ ನೆಲದ ಮಣ್ಣಿಂದ ಪುಟಿದಿದೆ. ಗ್ರಾಮಜೀವನ, ರೈತ ಬದುಕು ಬವಣೆ, ನಿಸರ್ಗದ ಚೆಲುವನ್ನು ಅನಾವರಣಗೊಳಿಸುವ ಕಾವ್ಯ ಅವರದಾಗಿದೆ. ಜಾನಪದ ಸೊಗಡಿನ ಜೊತೆ ರಾಜಕೀಯ ವಿಡಂಬನೆ, ಸಾತ್ವಿಕ, ಪ್ರತಿಭಟನೆ, ನೋವು, ಸಂಕಟ ವ್ಯಕ್ತವಾಗಿದೆ” ಎಂದು ಹೇಳಿದ್ದಾರೆ ಈ ಕೃತಿಗೆ ಬೆನ್ನುಡಿ ಬರೆದ ಕವಿ ಸಿದ್ಧಲಿಂಗಯ್ಯ. ಇಲ್ಲಿ ಗಂಧವತೀ ಪೃಥ್ವೀ, ಶುಭದ ಮಾರ್ಗ, ರಣರಂಗವೋ ಈ ಬದುಕು, ಮಧುಗಿರಿ, ಜಪಮಣಿ ಹಿಡಿವ ಮುನ್ನ, ಮಂಗ್ಯಾನಂಥ ತುಡುಗರು, ಮಾನವತೆಯ ಮೆರಸು, ನಂದನ ನಂದನ, ಹಸಿವು, ರಮ್ಯಗೀತೆ, ಅಲೆಗಳು ನಿಲ್ಲುವುದಿಲ್ಲ, ಭಾರತ ಸಾರಿದೆ ಏಕತಾ, ಶ್ರಾವಣ ಬಂದ, ಕೋರಿಕೆ, ಪ್ರೀತಿಯ ಅನುಭೂತಿ ಸೇರಿದಂತೆ ಹಲವು ಕವಿತೆಗಳು ಸಂಕಲನಗೊಂಡಿವೆ.
ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್.ಎಲ್.ಎನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ...
READ MORE