ಗಡಿನಾಡ ಚಿತ್ರಶಾಲೆ

Author : ಬಸವರಾಜ ಎಸ್. ಕಲೆಗಾರ

Pages 118

₹ 150.00




Year of Publication: 2015
Published by: ರೇಖಾಚಿತ್ರ ಪ್ರಕಾಶನ
Address: ಕೊಂಕಲ್, ವಾಯ-ವಡಗೇರ, ಶಹಾಪುರ ತಾಲ್ಲೂಕು, ಯಾದಗಿರಿ ಜಿಲ್ಲೆ- 585355

Synopsys

‘ಗಡಿನಾಡ ಚಿತ್ರಶಾಲೆ’ ಗಡಿ ಭಾಗದ ಪ್ರೌಢಶಾಲೆಯಲ್ಲಿನ ಕಲಾಪ್ರಗತಿಯ ದೀವಿಗೆ, ಕಲಾವಿದ, ಲೇಖಕ ಬಸವರಾಜ ಎಸ್. ಕಲೆಗಾರ ಅವರ ಕೃತಿ. ಲೇಖಕ ಡಾ. ಬಸವರಾಜ ಸಬರದ ಕೃತಿಯ ಮುನ್ನುಡಿಯಲ್ಲಿ ‘ಕಲಾ ಕ್ಷೇತ್ರದಲ್ಲಿ ಸದಾ ಹೊಸದನ್ನು ಹುಡುಕುತ್ತಿರುವ ಅನ್ವೇಷಕ ಬಸವರಾಜ ಕಲೆಗಾರ, ಗಡಿ ಭಾಗದ ಕಲೆಗೆ ಸಂಬಂಧಿಸಿದಂತೆ ರಚಿಸಿದ ಈ ಕೃತಿ ತುಂಬ ವಿಶಿಷ್ಟ. ಯಾದಗಿರಿ ಜಿಲ್ಲೆಯ ಗಡಿಭಾಗದಲ್ಲಿರುವ ಅಜಲಾಪುರ ಗ್ರಾಮದ ಪ್ರೌಢಶಾಲೆ ಚಿತ್ರಕಲೆಯ ಕೇಂದ್ರವಾಗಿದೆ. ಆ  ಗ್ರಾಮದ ಜನ-ಜೀವನದ ಚಿತ್ತಾರವನ್ನಿಲ್ಲಿ ಬಿಡಿಸಿದ್ದಾರೆ. ಇಲ್ಲಿ ಚಿತ್ರಕಲೆ ಇದೆ, ಚಿತ್ರಕಲಾ ಶಿಕ್ಷಕರಿದ್ದಾರೆ. ಮನೆ ಕಟ್ಟುವ ಸುತಾರಿ ಬಾಲಮ್ಮ, ತತ್ವಪದ ಗಾಯಕ ರಂಗು ಹುಸೇನಪ್ಪ ಹೀಗೆ ಇಡೀ ಗ್ರಾಮವೇ ಇಲ್ಲಿ ಜೀವಂತವಾಗಿದೆ. ಒಂದು ಗ್ರಾಮವನ್ನು ಹೇಗೆ ನೋಡಬೇಕೆಂಬುದಕ್ಕೆ ಈ ಕೃತಿ ಒಳ್ಳೆಯ ಉದಾಹರಣೆ ಎನ್ನಬಹುದು’ ಎಂದು ಪ್ರಶಂಸಿಸಿದ್ದಾರೆ.

About the Author

ಬಸವರಾಜ ಎಸ್. ಕಲೆಗಾರ
(06 July 1984)

ಡಾ. ಬಸವರಾಜ ಎಸ್. ಕಲೆಗಾರ ಮೂಲತಃ ಯಾದಗಿರಿ ಜಿಲ್ಲೆಯವರು. ಕವಿ, ಲೇಖಕ, ಚಿತ್ರಕಲಾವಿದರು. ಎಂ.ವಿ.ಎ, ಎಂ.ಫಿಲ್, ಪಿಹೆಚ್.ಡಿ ಪದವೀಧರರು. ಹಂಪಿ ಕನ್ನಡ ವಿವಿಯಲ್ಲಿ ದೂರ ಶಿಕ್ಷಣ ನಿರ್ದೇಶನಾಯ ಮೂಲಕ ಪತ್ರಿಕೋದ್ಯಮ ಡಿಪ್ಲೋಮಾ ಪೂರ್ಣಗೊಳಿಸಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ 2015-16ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಶೋಧನೆ ಕೈಗೊಂಡಿದ್ದು, ಸಂಶೋಧನಾ ಅಧ್ಯಯನ ವಿಷಯ ‘ಸಗರನಾಡಿನ ಜನಪದ ಶಿಲ್ಪಿಗಳ ಕಲೆ ಮತ್ತು ಬದುಕು: ಒಂದು ಅಧ್ಯಯನ’ ಪ್ರಬಂಧ ಸಲ್ಲಿಸಿದ್ದಾರೆ. ಪ್ರಕಟಿತ ಕೃತಿಗಳು- ನೀ ಮರೆಯಾದ ಕ್ಷಣಗಳು, ಬೆಳಕು, ಸಂಗಣ್ಣ ಎಂ. ದೋರನಹಳ್ಳಿ ಕಲೆ ಮತ್ತು ಬದುಕು(ಸಂಶೋಧನೆ), ಕಲಾನ್ವೇಷಣೆ, ಚಿತ್ರಶಿಲೆಯಲ್ಲಿ ಬುದ್ಧ, ಗಡಿನಾಡ ಚಿತ್ರಶಾಲೆ, ದೃಶ್ಯ ...

READ MORE

Related Books