ಲೇಖಕ ಚಕ್ರವರ್ತಿ ಸೂಲಿಬೆಲಿ ಅವರ ಕೃತಿ ‘ಗದರ್ ಚಳವಳಿ’. ಭಾರತದ ಸ್ವಾತಂತ್ರಕ್ಕಾಗಿ ಸುದೀರ್ಘ ಹೋರಾಟ ನಡೆದದ್ದು ಅನೇಕ ಸ್ತರಗಳಲ್ಲಿ - ನೆಲೆಗಳಲ್ಲಿ. 19ನೇ ಶತಮಾನದ ಮೊದಲ ಮೂರ್ನಾಲ್ಕು ದಶಕಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ರೈತ ಚಳವಳಿಗಳು, ಸಣ್ಣಪುಟ್ಟ ಸಂಸ್ಥಾನಗಳವರು ನಡೆಸಿದ ಸಂಘರ್ಷಗಳು ಕ್ರಮೇಣ ಸಂಘಟಿತ ರೂಪ ಪಡೆದುಕೊಂಡು “ಪ್ರಥಮ ಸ್ವಾತಂತ್ರ್ಯ ಸಂಗ್ರಾಮ'ವಾಗಿ ಭೋರ್ಗರೆದದ್ದು ಇತಿಹಾಸದ ಒಂದು ಸ್ವರ್ಣಪುಟ.
ಅಲ್ಲಿಂದ ಮುಂದೆ ಸ್ವಾತಂತ್ರ ಹೋರಾಟ ವ್ಯಕ್ತಿಗತ ನೆಲೆಯಲ್ಲಿಯೂ ಸಂಘಟನಾತ್ಮಕ ಸ್ತರದಲ್ಲಿಯೂ ವಿವಿಧ ರೂಪ-ಸ್ವರೂಪಗಳನ್ನು ತಳೆದು ಅಂತಿಮ ವಾಗಿ ಸಾಮ್ರಾಜ್ಯ ಶಾಹಿಯನ್ನು ಬುಡಮೇಲು ಮಾಡಿತು. ಅದೊಂದು ಸ್ಪೂರ್ತಿ ದಾಯಕ ಕದನ-ಕಥನ. ಈ ಸುದೀರ್ಘ ಹೋರಾಟದ ಪುಟಗಳಲ್ಲಿ ಹುದುಗಿರುವ ಅನೇಕ ಮಹತ್ತರ ಘಟನೆಗಳು, ಪ್ರಸಂಗಗಳು ಇಂದಿಗೂ ಹೆಚ್ಚಿನವರಿಗೆ ಅಪರಿಚಿತವಾಗಿಯೇ ಉಳಿದಿವೆ. ಅಂತಹವುಗಳಲ್ಲಿ ಪ್ರಮುಖವಾದದ್ದು ಗದರ್ ಚಳವಳು ದೇಶದೊಳಗೆ ಕ್ರಾಂತಿ ಚಟುವಟಿಕೆಗಳನ್ನು ನಡೆಸುವುದು ಕಷ್ಟಸಾಧ್ಯವೆನಿಸಿತೊಡಗಿದ ಸಮಯದಲ್ಲೇ ಬೇರೆ ಬೇರೆ ಕಾರಣಗಳಿಗಾಗಿ ಇಂಗ್ಲೆಂಡ್-ಅಮೆರಿಕ-ಕೆನಡಾ ಸೇರಿದಂತೆ ವಿಶ್ವದ ವಿವಿಧ ಭಾಗಗಳಿಗೆ ಹೋಗಿದ್ದ ಭಾರತೀಯರು, ಅಲ್ಲಿನ ಮುಕ್ತ ವಾತಾವರಣದ ಲಾಭ ಪಡೆದು ಭಾರತದ ಸ್ವಾತಂತ್ರ್ಯಕ್ಕಾಗಿ ಸಂಘಟಿತರಾದುದಲ್ಲದೆ 93-16ರ ಅವಧಿಯಲ್ಲಿ ಭಾರತಕ್ಕೆ ಮರಳಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದು, ನಮ್ಮ ಸ್ವಾತಂತ್ರ ಹೋರಾಟದ ಇತಿಹಾಸದಲ್ಲೇ ಒಂದು ಅಪೂರ್ವ ಸಂಗತಿ.
ಭಾರತೀಯರನ್ನು ಸಶಸ್ತ್ರ ಹೋರಾಟಕ್ಕೆ ಸಜ್ಜುಗೊಳಿಸುವುದಕ್ಕಾಗಿ ಪ್ರಾರಂಭವಾದ 'ಗದರ್' ಪತ್ರಿಕೆ ಗದರ್ ಪಾರ್ಟಿಯಾಗಿ ಕ್ರಾಂತಿಕಾರಿ ಸಂಘಟನೆಯಾಗಿ ಬ್ರಿಟಿಷ್ ಪ್ರಭುತ್ವ ವನ್ನು ಎದುರಿಸಿದ ಪರಿ ಅವಿಸ್ಮರಣೀಯ, ಇತಿಹಾಸ ಗರ್ಭದಲ್ಲಿ ಅಡಗಿರುವ ಈ ಮಹತ್ವದ ಹೋರಾಟದ ಆಳ-ಅಗಲಗಳನ್ನು ಪರಿಚಯಿಸುವುದಕ್ಕಾಗಿ ಈ ಕೃತಿಯನ್ನು ರಚಿಸಲಾಗಿದೆ.
ಚಕ್ರವರ್ತಿ ಸೂಲಿಬೆಲಿ ಎಂದೇ ಗುರುತಿಸಿಕೊಳ್ಳುವ ಮಿಥುನ್ ಚಕ್ರವರ್ತಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. 1980ರ ಏಪ್ರಿಲ್ 9 ರಂದು ಜನನ. ಓದಿದ್ದು, ಬೆಳೆದಿದ್ದು ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ. ತಂದೆ ದೇವದಾಸ್ ಸುಬ್ರಾಯ್ ಶೇಟ್, ಸೂಲಿಬೆಲಿಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿದ್ದಾರೆ. ಬೆಂಗಳೂರು ಜೈನ್ ಕಾಲೇಜಿನಲ್ಲಿ ಪಿಯುಸಿ ನಂತರ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರು. ವಾಗ್ಮಿ, ಅಂಕಣಕಾರ. ಸಾಮಾಜಿಕ ಕಾರ್ಯಕರ್ತ ಹಾಗೂ ಯುವ ಬ್ರಿಗೇಡ್ ಸಂಘಟನೆ ಸಂಸ್ಥಾಪಕ ಸೂಲಿಬೆಲಿ ಅವರು ‘ಮೇರಾ ಭಾರತ್ ಮಹಾನ್’, ‘ಪೆಪ್ಸಿ ಕೋಕ್ ಅಂತರಾಳ’, ‘ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ...
READ MORE