ಜಿ.ಎಸ್. ಶಿವರುದ್ರಪ್ಪ ಅವರ ಸಾಹಿತ್ಯ ಕುರಿತ ವಿಶ್ಲೇಷಣಾ ಲೇಖನಗಳ ಸಂಕಲನ -ಜಿ. ಎಸ್ಇ. ಶಿವರುದ್ರಪ್ಪ ಸಂಚಯ. ಶಿವರುದ್ರಪ್ಪ ಅವರ ಕವಿತೆಗಳು, ವಿಮರ್ಶೆ, ಮೀಮಾಂಸೆ, ಪ್ರವಾಸ ಸಾಹಿತ್ಯ, ಸಂಕೀರ್ಣ ಕೃತಿಗಳ ಕುರಿತು ವಿಶ್ಲೇಷಿಸಲಾಗಿದೆ. ಕವಿರಾಜಮಾರ್ಗ: ಕೆಲವು ಪ್ರತಿಕ್ರಿಯೆಗಳು, ಪಂಪ-ಹೋಮರ್: ಒಂದು ಪ್ರಸಂಗ, ವಚನಕಾರರ ವಿಚಾರಕ್ರಾಂತಿ, ಹರಿಹರನ ದರ್ಶನ, ಪರಂಪರೆ ಮತ್ತು ರಾಘವಾಂಕ ಪ್ರತಿಭೆ, ಕವಿ ಸರ್ವಜ್ಞ, ನವೋದಯದ ನಾಂದಿ, ಕುವೆಂಪು ಕಾವ್ಯ, ದೇಸೀಯತೆಯಲ್ಲಿ ಬೇರೂರಿ ಅರಳಿದ ದತ್ತ ಪ್ರತಿಭೆ, ಪುತಿನ ಅವರ ವಿಶಿಷ್ಟತೆ, ವಿನಾಯಕರ ಕಾವ್ಯಮಾಗಧ, ಗೋಪಾಲಕೃಷ್ಣ ಅಡಿಗರ ಕಾವ್ಯ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಗಿದೆ. ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರೊ. ಎಸ್.ಜಿ.ಸಿದ್ಧರಾಮಯ್ಯ, ಡಾ. ಪ್ರಧಾನ ಗುರುದತ್ತ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.