ಎರಡು ಸೆಲೆ ಒಂದು ನೆಲೆ

Author : ಚನ್ನಪ್ಪ ಕಟ್ಟಿ

Pages 45

₹ 6.00




Year of Publication: 1982
Published by: ನೆಲ ಪ್ರಕಾಶನ
Address: ಸಿಂದಗಿ, ವಿಜಾಪುರ- 586128

Synopsys

‘ಎರಡು ಸೆಲೆ ಒಂದು ನೆಲೆ’ಯಲ್ಲಿ ತಮ್ಮ ಕಾವ್ಯದ ನೆಲೆಯನ್ನು ಕಂಡುಕೊಂಡ ಭರವಸೆ ಹುಟ್ಟಿಸಿದ ಕವಿ ಚನ್ನಪ್ಪ ಕಟ್ಟಿ. ಕಾವ್ಯದ ವಿವಿಧ ಮಜಲನ್ನು ಅತ್ಯಂತ ವಿಭಿನ್ನವಾಗಿ ದಾಖಲಿಸಿದ್ದಾರೆ. ಗೆಳೆಯ ನಾಗೇಶ ರಾಂಪೂರ ಅವರರೊಂದಿಗೆ ಈ ಸಂಕಲನವನ್ನು ಪ್ರಕಟಿಸಿದ್ದಾರೆ. ಇಲ್ಲಿ ನಾಗೇಶ ರಾಂಪೂರ ಮತ್ತು ಚನ್ನಪ್ಪ ಕಟ್ಟಿಯವರ ಕವಿತೆಗಳಿವೆ. 

ನಾಗೇಶ ರಾಂಪೂರ ಹಾಗೂ ಚನ್ನಪ್ಪ ಕಟ್ಟಿ ಇವರಿಬ್ಬರ ಈ ಜಂಟಿ ಸಂಕಲನ ವಿಭಿನ್ನ ಪ್ರಯತ್ನ ಎನ್ನಬಹುದು. ಮೊದಲ ಸೆಲೆಯ ಕವಿ ನಾಗೇಶ ರಾಂಪೂರ ತುಂಬಾ ಭಾವಜೀವಿ ಎಂಬುದಕ್ಕೆ ಅವರಿಟ್ಟ ಭಾವನಾ ಹೆಸರೇ ಸಾಕ್ಷಿ. ಸರಳ ಅನುಭವಗಳನ್ನು ಕೋಮಲತರವಾದ ಭಾವನೆಗಳನ್ನೂ ಭಾಷೆಯಲ್ಲಿ ಹಿಡಿದಿಡುವ ಅವರ ಪ್ರಯತ್ನ ಪ್ರಾಮಾಣಿಕವಾಗಿದೆ. ಎಲ್ಲಾ ಕವನಗಳ ಉದ್ದಕ್ಕೂ ಹರಿದಾಡುವ ಆತ್ಮವಿಮರ್ಶೆ ಮಾನಸಿಕ ಆರೋಗ್ಯದ ಲಕ್ಷಣ, ‘ಹೇಸಿ ಬದುಕಿಗೆ ಸತ್ಯಸಾಕ್ಷಿ ನಾನು’..ಏನಾಗಲಿ..ಮರೆತು ಮುಂತಾದ ಕವನಗಳಲ್ಲಿ ಇದು ಸ್ಪಷ್ಟ. ಹಾಗೆೆ ಚನ್ನಪ್ಪ ಕಟ್ಟಿಯವರ ಕವಿತೆಗಳು ಗಮನ ಸೆಳೆಯುತ್ತವೆ.

About the Author

ಚನ್ನಪ್ಪ ಕಟ್ಟಿ
(01 May 1956)

ಡಾ. ಚನ್ನಪ್ಪ ಕಟ್ಟಿಯವರ ಪೂರ್ಣ ಹೆಸರು ಚನ್ನಪ್ಪ ಕನಕಪ್ಪ ಕಟ್ಟಿ. ಮೂಲತಃ  ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಹಿರೇಹಾಳ ಗ್ರಾಮದಲ್ಲಿ ಮುಗಿಸಿದ ಅವರು ಮಾಧ್ಯಮಿಕ ಶಿಕ್ಷಣವನ್ನು ಶ್ರೀ ವೀರಪುಲಿಕೇಶಿ ಮಾಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಆನಂತರ ಶ್ರೀವೀರಪುಲಿಕೇಶಿ ಪದವಿ ಪೂರ್ವ ಮಹಾವಿದ್ಯಾಲಯ, ಬಾದಾಮಿಯಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದ ಅವರು, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡದಲ್ಲಿ ಇಂಗ್ಲಿಷ್ ನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಸಿಂದಗಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ...

READ MORE

Related Books