ರೋಹಿತ್ ಚಕ್ರತೀರ್ಥ ಅವರ ಕೃತಿ-ಎಂದೆಂದೂ ಬಾಡದ ಮಲ್ಲಿಗೆ. ಕಲೆ ಸಾಹಿತ್ಯ ಕುರಿತಂತೆ ಮಹತ್ವದ ಲೇಖನಗಳನ್ನು ಇಲ್ಲಿ ಸಂಕಲಿಸಲಾಗಿದೆ. ಲೇಖಕನ ಬರೆಹ ಶೈಲಿ ಓದುಗರನ್ನು ಸೆಳೆಯುತ್ತದೆ. ಸಮಯೋಚಿತ ಮತ್ತು ವಸ್ತುನಿಷ್ಠ ಬರೆಹಗಳು ಇಲ್ಲಿವೆ. ಷೇಕ್ಸ್ ಪಿಯರ್, ಕೆ.ಎಸ್. ನರಸಿಂಹಸ್ವಾಮಿ, ಯು.ಆರ್. ಅನಂತಮೂರ್ತಿ, ವರಕವಿ ಬೇಂದ್ರೆ, ಶಿವರಾಮ ಕಾರಂತ ಹೀಗೆ ಕನ್ನಡ ಸಾಹಿತ್ಯದ ದಿಗ್ಗಜರ ವಿಚಾರಧಾರೆಗಳೊಂದಿಗೆ ಇಲ್ಲಿಯ ಲೇಖನಗಳು ತಮ್ಮದೇ ಶೈಲಿ- ಲಾಲಿತ್ಯವನ್ನು ಹೊಂದಿವೆ.
ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...
READ MORE