ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ

Author : ವೀರಣ್ಣ ಮಡಿವಾಳರ

Pages 108

₹ 99.00




Year of Publication: 2014
Published by: ಜಾನೂ ಪ್ರಕಾಶನ
Address: ಗಾವಡ್ಯಾನವಾಡಿ, ಕೇರೂರ - 591213, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ
Phone: 8722290970

Synopsys

ವೀರಣ್ಣ ಮಡಿವಾಳರ ಖಂಡ ಕಾವ್ಯ ‘ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ’. ಬದುಕಿನ ವಿಷಾದ, ವರ್ತಮಾನದ ತಲ್ಲಣಗಳಿಗೆ ಇಲ್ಲಿನ ಕಾವ್ಯವು ದನಿಯಾಗಿದೆ. ಕೃತಿಗೆ ಮುನ್ನುಡಿ ಬರೆದ ಎಸ್‌. ಎಫ್‌. ಯೋಗಪ್ಪನವರ್‌ ಅವರು ‘ಕವಿಯು ಲಿರಿಕಲ್ ಸರಕುಗಳಲ್ಲಿ ಗುರುತಿಸುವ ಬದುಕಿನ ದುರಂತದ ಚಿತ್ರಗಳು ಅಭ್ಯಸಿಸುವಂತಿವೆ. ಬದುಕಿನ ವ್ಯಥೆಯನ್ನು, ಅಸ್ತಿತ್ವದ ಪಡಿಪಾಟಲನ್ನು, ಕುದಿಯುವ ತಾಪವನ್ನು ಲಿರಿಕಲ್ ಸರಕುಗಳ ಮೂಲಕ ಶೋಧಿಸುವ ಹವಣಿಕೆ ಮಾಗಿದ ಮನಸ್ಸಿನ ಸ್ಥಿತಿಯನ್ನು ತೋರಿಸುತ್ತವೆ. ಇದು ಕಾವ್ಯ ಪ್ರೌಢಿಮೆಯಾಗಿದೆ’ ಎಂದಿದ್ದಾರೆ. ಅವರ ಒಂದು ಕಾವ್ಯದ ತುಣುಕು ಹೀಗಿದೆ - ‘ಹುಳು ಹುಪ್ಪಟೆ ಗುಂಯ್ ಗುಟ್ಟಿದಂತೆ ಅರಳುತಿಹ ಹೂಗಳ ಅಳುದ ಇದು ಮುಗಿಯದ ಕತ್ತಲ ಚೆಲ್ಲಾಟ ಅರಳುತಿಹ ಹೂಗಳಲ್ಲಿ ಅಳುದನಿ ಕೇಳುವಂತಹದು, ಕತ್ತಲೆಗೆ’

About the Author

ವೀರಣ್ಣ ಮಡಿವಾಳರ
(01 September 1983)

ವೀರಣ್ಣ ಮಡಿವಾಳ ಅವರು ಸೆಪ್ಟೆಂಬರ್ 01, 1983ರಂದು ಜನಿಸಿದರು. ಕಲಿವಾಳ, ಕಲಕೇರಿ, ಸಿರಿಗೆರೆ, ಮುಂಡರಗಿ, ಕೊಪ್ಪಳ ಮತ್ತು ಗುಲ್ಬರ್ಗದಲ್ಲಿ ವಿದ್ಯಾಭ್ಯಾಸ. 2007 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸವಣೂರು ತಾಲ್ಲೂಕಿನ ಮೆಳ್ಳಾಗಟ್ಟಿ ಪ್ಲಾಟ್ ನಲ್ಲಿ ಸೇವೆ ಆರಂಭ. ಸದ್ಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಾವಡ್ಯಾನವಾಡಿಯಲ್ಲಿ ವೃತ್ತಿ. ಗುಲ್ಬರ್ಗಾದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರಥಮ ರ್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2010ರಲ್ಲಿ 'ನೆಲದ ಕರುಣೆಯ ದನಿ' ಕವನ ಸಂಕಲನ ಮತ್ತು ಆಡಿಯೋ ಬುಕ್ ಪ್ರಕಟವಾಗಿದೆ. ಚಿತ್ರ ಮತ್ತು ಫೊಟೋಗ್ರಫಿಯಲ್ಲೂ ಕವಿತೆಯನ್ನೇ ಹುಡುಕುತ್ತಿರುವ ವೀರಣ್ಣ 2013 ...

READ MORE

Related Books