ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಕವನ ಸಂಕಲನ-ಎಲ್ಲಿದೆ ಶಿವಾಪುರ. ಈವರೆಗೆ ಅವರು ಒಟ್ಟು 10 ಕವನ ಸಂಕಲನಗಳನ್ನು ಬರೆದಿದ್ದು, ಗ್ರಾಮೀಣ ಬದುಕನ್ನು ಸಮೀಫದಿಂದ ಕಂಡ ಕವಿಗಳು, ಬದುಕಿನ ಸೂಕ್ಷ್ಮತೆಯನ್ನು ಕಾವ್ಯವಾಗಿಸಿದ್ದಾರೆ. ನೆಲಮೂಲ ಚಿಂತನೆ ಹಾಗೂ ಸಂಸ್ಕೃತಿಯನ್ನು ಒಳಗೊಂಡಿವೆ. ಶಿವ ಎಂದರೆ ದೇವರು. ಪುರ ಎಂದರೆ ಊರು. ಇಲ್ಲಿ ಎಲ್ಲ ಜೀವಸಂಕುಲಕ್ಕೂ ಬದುಕುವ ಹಕ್ಕಿದೆ. ಆದರೆ, ನಗರೀಕರಣವು ಗ್ರಾಮೀಣ ಪರಿಸರದ ಮೇಲೆ ಅಟ್ಟಹಾಸ ಮಾಡುತ್ತಿದ್ದು, ಬಂಡವಾಳಶಾಹಿ, ವಸಾಹತುಶಾಹಿಯನ್ನುಇಲ್ಲಿಯ ಕವಿತೆಗಳು ವಿರೋಧಿಸುತ್ತವೆ. ಗ್ರಾಮೀಣ ಸೊಗಡು ಕ್ರಮೇಣ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿದೆ ಎಂಬ ವಿಷಾದವೂ ಕವನಗಳ ಪ್ರಮುಖ ಅಂಶಗಳೂ ಆಗಿವೆ.
ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು. ಹಂಪಿಯ ...
READ MORE