'ಎಲ್ಲರಂತಲ್ಲ ನಾವು' ಈ ಶೀರ್ಷಿಕೆಯೇ ವಿಭಿನ್ನ ವಿಶೇಷ ಎನಿಸುತ್ತದೆ ಅಲ್ಲವೇ?. ಇದು ಶ್ರೀನಿವಾಸ . ಪಾ. ನಾಯ್ಡು ರವರ ಚೊಚ್ಚಲ ಕವನಸಂಕಲನದ ಶೀರ್ಷಿಕೆ. ಶೀರ್ಷಿಕೆಗೆ ತಕ್ಕಂತೆ ಇಲ್ಲಿರುವ ಕವನಗಳೂ ಮಾಮೂಲಿಯಾಗಿ ಕಾಣಬರುವ ಕವನಗಳಿಗಿಂತ ಕೊಂಚ ಭಿನ್ನವಾಗಿ ಕಾಣುತ್ತವೆ. "ಪ್ರಶ್ನೆ ಪತ್ರಿಕೆ ನಮ್ಮ ಈ ಬದುಕು ಇಲ್ಲಿನ ಪ್ರಶ್ನೆಗಳಿಗೆ ನಮಗೆ ಗೊತ್ತಿಲ್ಲ ಉತ್ತರ ಗೊತ್ತಿರುವ ಉತ್ತರಗಳಿಗೆ ಇಲ್ಲಿ ಪ್ರಶ್ನೆಗಳೇ ಇಲ್ಲ". ಎಷ್ಟು ಅರ್ಥಪೂರ್ಣ ವಾಸ್ತವಕ್ಕೆ ಹತ್ತಿರವಾದ ಸಾಲುಗಳು. ಕೆಲವೊಮ್ಮೆ ನಾವು ಅಗತ್ಯಕ್ಕಿಂತ ಹೆಚ್ಚು ಮಾತನಾಡುತ್ತೇವೆ. ಕೆಲವೊಮ್ಮೆ ಮಾತನಾಡಬೇಕಾದ ಸಂದರ್ಭದಲ್ಲಿ ಮೌನ ಅಥವ ಕಡಿಮೆ ಮಾತಾಡುತ್ತೇವೆ.
ಶ್ರೀನಿವಾಸ.ಪಾ.ನಾಯ್ಡು ಅವರು ಮೂಲತಃ ಮಲೆನಾಡಿನ ಸೀಮೆಯ ಚಿಕ್ಕಮಗಳೂರಿನವರು. ಪ್ರಸ್ತುತ ಬಸರೀಕಟ್ಟೆ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಬಾಲ್ಯದಿಂದಲೂ ಓದಿನಲ್ಲಿದ ಆಸಕ್ತಿ ಹೊಂದಿದ ಅವರು ಪುಸ್ತಕಗಳ ಒಡನಾಟ, ಪುಟ್ಟ ಮಕ್ಕಳ ಸಾಹಚರ್ಯದಿಂದ ಬರೆಯಲು ಪ್ರೇರಣೆಯನ್ನು ಹೊಂದಿದ್ದಾರೆ. ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹಲವು ಕವಿಗೋಷ್ಠಿಗಳಲ್ಲಿ ಕವಿತಾ ವಾಚನ ಮಾಡಿ ಕವಿತೆಯ ಮೋಹಪಾಶಕ್ಕೆ ಸಿಲುಕಿ, ಅದರೊಳಗೆ ಆನಂದವನು ಕಾಣುತ್ತಿರುವ ಕಾವ್ಯೋಪಾಸಕ. ಕೃತಿಗಳು: ಎಲ್ಲರಂತಲ್ಲ ನಾವು ...
READ MORE