‘ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನು’ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅವರ ಕೃತಿ. ಸಂವಿಧಾನ ಶಿಲ್ಪಿ, ಬಾಬ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ದಲಿತರಿಗೆ ಮಾತ್ರವೇ ಸೀಮಿತಗೊಳಿಸಿ, ದಲಿತರನ್ನೂ, ಜತೆಗೆ ಇತರೆ ಜನವರ್ಗಗಳನ್ನು ಹಾಗೆ ನಂಬಿಸಲಾಗಿದೆ. ಬಹುಶಃ ಇದು ಪಟ್ಟಭದ್ರ ವ್ಯವಸ್ಥಿತ ಷಡ್ಯಂತ್ರವೂ ಇರಬಹುದು. ನಿಜ, ಅಂಬೇಡ್ಕರ್ ದಲಿತ ನಾಯಕ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಅವರು ದಲಿತರಿಗೆ ಮಾತ್ರವೇ ನಾಯಕರಲ್ಲ.
ಎನ್ನುವುದೂ ಅಷ್ಟೇ ಸತ್ಯ. ದೇಶದ ಹಲವು ಕ್ಷೇತ್ರಗಳಿಗೆ, ಇತರೆ ಶೋಷಿತ ಹಿಂದುಳಿದ ಸಮುದಾಯಗಳಿಗೆ ಮತ್ತು ಮಹಿಳೆಯರಿಗೆ ಹಾಗೆಯೇ ಸಮಸ್ತ ಭಾರತೀಯರಿಗೂ ಅವರು ನೀಡಿದ ಕೊಡುಗೆ ಅಪಾರವಾದುದು. ಆದರೆ ಇದನ್ನು ಉದ್ದೇಶ ಪೂರ್ವಕವಾಗಿ ಮರೆಮಾಚಲಾಗಿದೆ. ಅಂಬೇಡ್ಕರ್ ಒಬ್ಬ ವಿಶ್ವನಾಯಕ, ಕಾರ್ಮಿಕ ನಾಯಕ ಅರ್ಥಶಾಸ್ತ್ರಜ್ಞ ನ್ಯಾಯವಾದಿ, ಸಂವಿಧಾನ ಕರ್ತೃ, ಮಾನವತೆ ವಾದಿಯೂ ಹಾಗೂ ಸಮಾಜ ವಿಜ್ಞಾನಿಯೂ ಆಗಿದ್ದರು. ದೇಶಕ್ಕೆ ಪ್ರಬುದ್ಧ ಸಂವಿಧಾನವನ್ನು ನೀಡಿ ದೇಶದ ಜನತೆಯ ನಾಯಕರೂ ಆಗಿದ್ದಾರೆ. ಹೀಗಾಗಿಯೇ ಕೊಲಂಬಿಯಾ ವಿಶ್ವವಿದ್ಯಾನಿಲಯ ಅಂಬೇಡ್ಕರರನ್ನು ಪ್ರತಿಭೆಯ ಚಿಲುಮೆ' ಎಂದು ಕರೆದಿದೆ. ವಿಶ್ವಸಂಸ್ಥೆಯು ಅಂಬೇಡ್ಕರ್ ಅವರ ವಿದ್ವತ್ತನ್ನು ಗುರ್ತಿಸಿಯೇ ಅವರ ಜನ್ಮದಿನವಾದ ಏಪ್ರಿಲ್ 14 ನ್ನು “ವಿಶ್ವ ಜ್ಞಾನ ದಿನ'ವನ್ನಾಗಿ (World Knowledge Day) ಘೋಷಿಸಿದೆ. ಇದು ಭಾರತೀಯರಾದ ನಾವು ಹೆಮ್ಮೆ ಪಡಬೇಕಾದ ಸಂಗತಿ. ಅಂಬೇಡ್ಕರ್ ಅವರು ಕಾರ್ಮಿಕ ವರ್ಗಕ್ಕಾಗಿ ಮಾಡಿದ ಮಹತ್ವದ ಕಾರ್ಯಗಳ ಕುರಿತಾದ ಮಾಹಿತಿ ಈ ಕೃತಿಯಲ್ಲಿದೆ
ನ್ಯಾ.ಎಚ್.ಎನ್.ನಾಗಮೋಹನದಾಸ್ ಅವರು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತಿಹೊಂದಿದ್ದಾರೆ. ಸಂವಿಧಾನ, ಕಾನೂನು, ಮಹಿಳಾ ಸಮಾನತೆ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಜನಭಾಷೆಯಲ್ಲಿ ಸರಳವಾಗಿ ಕಾನೂನನ್ನು ಅರ್ಥಮಾಡಿಸುವಲ್ಲಿ ಕಾರ್ಯ ಪ್ರೌರುತ್ತರು. ಕಾನೂನು, ಅಸಮಾನತೆ, ಸಂವಿಧಾನದ ಅರಿವಿನ ಕುರಿತಾಗಿ ಹಲವು ಕೃತಿಗಳನ್ನು ರಚಿಸಿರುವ ನಾಗಮೋಹನದಾಸರು ದಲಿತ, ಮಹಿಳಾಪರ ಹೋರಾಟಗಳಲ್ಲಿ ಭಾಗಿಯಾಗಿ ಕಾನೂನಿನ ಅರಿವು ಮೂಡಿಸುತ್ತಾರೆ. ಅವರ ಕೃತಿಗಳು- ಮಹಿಳಾ ಅಸಮಾನತೆ, ಸಂವಿಧಾನ ಓದು ವಿದ್ಯಾರ್ಥಿ ಯುವಜನರಿಗಾಗಿ ಕೈಪಿಡಿ ಇತ್ಯಾದಿ. ...
READ MORE