ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಕೃತಿ-ಧನ ದೇವೋಭವ. ತತ್ವಜ್ಞಾನಿ ಯು. ಜಿ ಎಂದೇ ಖ್ಯಾತಿಯ ಯು. ಕೃಷ್ಣಮೂರ್ತಿ ಅವರ ಮಾತನ್ನು ಅಂದರೆ ‘ಜೀವನದಲ್ಲಿ ಹಣವೇ ಮುಖ್ಯ. ದುಡ್ಡು ಮಾಡಲು ನಾಚಿಕೆಪಟ್ಟುಕೊಳ್ಳಬೇಡಿ. ಮುಖಪುಟದ ಮೇಲೆ ಉಲ್ಲೇಖಿಸಿದ್ದಾರೆ. ಪ್ರೀತಿಸುವುದಿದ್ದರೆ ಹಣವೊಂದನ್ನೇ ಪ್ರೀತಿಸಿ, ದುಡ್ಡಿನ ವಿರುದ್ಧ ಮಾತನಾಡುವವರನ್ನು ನಂಬಬೇಡಿ’ ಕೃತಿಯ ಮುಖಪುಟದಲ್ಲಿ ಉಲ್ಲೇಖಿಸಲಾಗಿದೆ. ಪ್ರೇರಣಾತ್ಮಕ ಚಿಂತನೆಗಳ ಬರಹಗಳು ಈ ಕೃತಿಯಲ್ಲಿ ಒಳಗೊಂಡಿವೆ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE