ದೇವರಿಗೆ ಬೀಗ

Author : ಟಿ.ಪಿ. ಉಮೇಶ

Pages 86

₹ 50.00




Year of Publication: 2021
Published by: ಲೇಖನ ಪ್ರಕಾಶನ
Address: ತೊಡರನಾಳು ಟಿ.ನುಲೇನೂರು ಅಂಚೆ,  ತಾ: ಹೊಳಲ್ಕೆರೆ, ಜಿ: ಚಿತ್ರದುರ್ಗ-577526

Synopsys

ಕವಿ ಟಿ.ಪಿ. ಉಮೇಶ್ ಅವರ ನಾಲ್ಕನೇ ಕವನ ಸಂಕಲನ-ದೇವರಿಗೆ ಬೀಗ. ಒಟ್ಟು 35 ಕವಿತೆಗಳಿವೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಡಾ.ರಾಜಶೇಖರ ಮಠಪತಿ (ರಾಗಂ) ‘ ಕಟು ಸತ್ಯಗಳನ್ನು ದಕ್ಕಿಸಿಕೊಂಡು ಛಲದಂಕಮಲ್ಲನಂತೆ ನಿರಂತರವಾಗಿ ಬೆಳೆದ ಈ ಕವಿಯ ಕವಿತೆಗಳೆಲ್ಲ ಜೀವಮುಖಿಯಾದ ಭಾವನೆಗಳಿಗೆ ಸಾಕ್ಷಿಯಂತಿವೆ. ಜೀವ ವೈರುಧ್ಯಕ್ಕೆ ಇಲ್ಲಿ ಆಸ್ಪದವಿಲ್ಲ. ಈ ಕೃತಿ ಸೋತವರಿಗೆ ಸಾಕ್ಷಿಯಾದ ಕಾವ್ಯ ಕೃತಿಯಲ್ಲ ಭರವಸೆಯನ್ನು ನಂಬಿದವರ ಬೆಳಕಿನ ಊರುಗೋಲು. ಇಡೀ ಕಾವ್ಯ ಸಂಕಲನದಲ್ಲಿ ದೇವರು, ಮಾತು, ಗಾಳಿ, ಅಪಘಾತ, ಭೂಮಿ, ಮನಸ್ಸು, ನವಿಲ ನರ್ತನ, ಮಳೆ, ಸಾವು, ಹೀಗೆ ಕವಿ ಕಂಡುಂಡ ಸಾವಿರಾರು ಚಿತ್ರಗಳ ಸರಮಾಲೆ ಇದೆ. 
ನೆಲವನ್ನು ಕನಸಿನಷ್ಟೇ ಕಡು ಪ್ರೀತಿಯಿಂದ ನೋಡುವ ಕವಿ ಗೆಳೆಯ ಉಮೇಶನ ಕಾವ್ಯ ಇಡೀ ಪಾಶ್ಚಾತ್ಯ ರಮ್ಯ ಕಾವ್ಯದ ಪರಂಪರೆಯನ್ನು ನೆನಪಿಗೆ ತರುತ್ತದೆ. the poetry of the earth is never dead ಎಂದು ನಂಬಿದವರು ಅವರು.  ಕವಿ ಉಮೇಶ ಕಾವ್ಯವನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ಕಟ್ಟುವತ್ತ ಧ್ಯಾನಸ್ಥರಾಗಿದ್ದಾರೆ. ಭೌತಿಕವಾಗಿ ಎಲ್ಲವನ್ನು ಗೆದ್ದ ಈ ಯುಗ ಭಾವದಾರಿತ್ರ್ಯತೆಗೆ ಒಳಗಾಗುವುದನ್ನು ತಪ್ಪಿಸಲು ಇವರು ತಮ್ಮ ಕಾವ್ಯ ಮುಖೇನ ಪ್ರಯತ್ನಿಸುತ್ತಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

About the Author

ಟಿ.ಪಿ. ಉಮೇಶ

ಲೇಖಕ ಟಿ.ಪಿ. ಉಮೇಶ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತೊಡರನಾಳು ಟಿ. ನುಲೇನೂರು ಗ್ರಾಮದವರು. ಅಲ್ಲಿಯೇ ಹೈಸ್ಕೂಲ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ನಂತರ ಕುವೆಂಪು ವಿ.ವಿ. ಯಿಂದ ಇಂಗ್ಲಿಷ್ ಹಾಗೂ ರಾಜ್ಯಶಾಸ್ತ್ರದಲ್ಲಿ ಪ್ರತ್ಯೇಕವಾಗಿ ಸ್ನಾತಕೋತ್ತರ ಪದವಿ ಮತ್ತು ಮೈಸೂರಿನ ಮಾನಸಗಂಗೋತ್ರಿಯ ಮುಕ್ತ ವಿ.ವಿ.ಯಿಂದ ಕನ್ನಡ ಹಾಗೂ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ, ಹೊಳಲ್ಕೆರೆ ಯಲ್ಲಿ ವಾಸವಿದ್ದು, ಹೊಳಲ್ಕೆರೆಯ ಅಮೃತಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿದ್ದಾರೆ. ಕೃತಿಗಳು: ನನ್ನ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್ (ಮಕ್ಕಳ ಹಾಡುಗಳು), ವಚನಾಂಜಲಿ, ಫೋಟೋಕ್ಕೊಂದು ಫ್ರೇಮು (ಕವನ ಸಂಕಲನ) ಪ್ರಶಸ್ತಿ ಪುರಸ್ಕಾರಗಳು: ತಾಲೂಕು ಅತ್ಯುತ್ತಮ ...

READ MORE

Related Books