ದೀಪಧಾರಿ

Author : ಚೆನ್ನವೀರ ಕಣವಿ

Pages 50

₹ 45.00




Year of Publication: 1956
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಸಂ. 9, ’ರಮ್ಯ’, ಗೋಕುಲಂ, 3ನೆಯ ಹಂತರ, ಮೈಸೂರು
Phone: 2513821/9880749412

Synopsys

ಕಣವಿಯವರ ಐದನೆಯ ಸಂಕಲನ ’ದೀಪಧಾರಿ’ಯಲ್ಲಿ 17 ಕವಿತೆಗಳಿವೆ. ಈ ಸಂಕಲನವು ಕಣವಿಯವರ ಬದಲಾದ ಕಾವ್ಯ ಸಂದರ್ಭವನ್ನು ಸೂಚಿಸುವ ಹಾಗಿದೆ. ಈ ಸಂಕಲನದಲ್ಲಿ ನವೋದಯದ ಭಾವಗೀತೆಗಳಿವೆ. ಹಾಗೆಯೇ ನವ್ಯದ ಹೊಸ ಪ್ರಯೋಗಗಳೂ ಇವೆ. ಧೋರಣೆಯು ಬದಲಾಗುವ ಮುನ್ನ ಇರುವ ಸಂಕ್ರಮಣಾವಸ್ಥೆಯ ಕವಿತೆಗಳು ಈ ಸಂಕಲನದಲ್ಲಿವೆ.  ಬದಲಾವಣೆ ದಿಢೀರನೇ ಸಂಭವಿಸುವುದಿಲ್ಲ. ಸಂಕ್ರಮಣಾವಸ್ಥೆ ದಾಟಿದ ಮೇಲೆ ಹೊಸತನ ನೆಲೆ ನಿಲ್ಲುತ್ತದೆ. ಪರಂಪರೆಯ ಕೊಂಡಿ ಕಳಚಿಕೊಳ್ಳದೇ ಅದರ ನೆಲೆಗಟ್ಟಿನ ಮೇಲೆ ಹೊಸ ಪ್ರಯೋಗ ಮಾಡಿದ ರೀತಿಯ ಕವಿತೆಗಳು ಈ ಸಂಕಲನದಲ್ಲಿವೆ. 

About the Author

ಚೆನ್ನವೀರ ಕಣವಿ
(28 June 1928)

‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...

READ MORE

Related Books