ಮಧು ವೈ ಎನ್ ಅವರ ಲೇಖನಗಳ ಸಂಕಲನ ಡಾರ್ಕ್ ವೆಬ್. ಲೇಖಕರೇ ಹೇಳಿರುವಂತೆ ಪುಸ್ತಕದ ಹುಟ್ಟಿಗೆ ಕಾರಣ ಫೇಸ್‌ಬುಕ್ಕಲ್ಲಿ ನಾನು ಬರೆಯಲು ಆರಂಭಿಸಿದ ಕಂಪ್ಯೂಟರ್ ಬಗೆಗಿನ ಪುಟ್ಟ ಅಂಕಣಗಳು. ಓದುಗರು ತೀವ್ರವಾಗಿ ಆಸಕ್ತಿ ತೋರಿಸಿದರು, ಪುಸ್ತಕ ಮಾಡಿಕೊಡಿ ಎಂದರು. ಪುಸ್ತಕವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮೂಲಭೂತವಾಗಿ ಕಂಪ್ಯೂಟರು ಹೇಗೆ ಕೆಲಸ ಮಾಡುತ್ತದೆ-ತಿಳಿಯಲು ಮೊದಲ ಭಾಗ, ಹೇಗೆ ಬಳಸಬೇಕು ಏನೆಲ್ಲ ಸುರಕ್ಷಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಯಲು ಎರಡನೆಯ ಭಾಗ, ಇದೇನಿದು ಎಲ್ಲಿ ನೋಡಿದರೂ ಕ್ಲೌಡು ಗಿವ್ಡು ಆರ್ಟಿಫಿಶಿಯಲ್ ಇಂಟೆಲಿಜೆನ್ನು ಅಂತಾರಲ್ಲ - ಮೂರನೆಯ ಭಾಗ, ತಂತ್ರಜ್ಞಾನದ ಜಗತ್ತಿನೊಳಗಿನ ತಂತ್ರ ಮಂತ್ರ ರಾಜಕೀಯ ತಪ್ಪು ಒಪ್ಪು ಗಾಸಿಪ್ಪು-ಹರಟೆ ನಾಲ್ಕರಲ್ಲಿ.
1987ರಲ್ಲಿ, ಜನಿಸಿದ ಮಧುಸೂಧನ್ ವೈ ಎನ್ ಮೂಲತಃ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಯರಗುಂಟೆ ಗ್ರಾಮದವರು.ತುಮಕೂರಿನ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ, ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ, ಬಿಟ್ಸ್ ಪಿಲಾನಿಯಿಂದ ಸಾಫ್ಟ್‌ವೇರ್ ಸಿಸ್ಟಮ್‌ನಲ್ಲಿ ಮಾಸ್ಟರ್ಸ್ ಡಿಗ್ರಿ, 2008ರಲ್ಲಿ ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗ ಆರಂಭ. ಸಧ್ಯಕ್ಕೆ ಐಬಿಎಮ್ ಉದ್ಯೋಗಿ, ಬೆಂಗಳೂರಿನಲ್ಲಿ ವಾಸ, ಸಾಹಿತ್ಯದ ಓದು, ವಿಶ್ವ ಸಿನಿಮಾಗಳ ಟೀಕೆಗೆ ಇವರ ಹವ್ಯಾಸ. ಇವರ ಚೊಚ್ಚಲ ಕೃತಿ ಕಾರೇಹಣ್ಣು" ಕಥಾ ಸಂಕಲನವು 2019ರ 'ಈ ಹೊತ್ತಿಗೆ' ಕಥಾ ಸಂಕಲನ ಪ್ರಶಸ್ತಿಗೆ ಭಾಜನವಾಗಿದೆ. 'ಬಹುರೂಪಿ'ಯಿಂದ ಪ್ರಕಟವಾಗುತ್ತಿರುವ `ಫೀಫೋ' ಮಧು ...
READ MORE