ದಲಿತ ಸಾಹಿತ್ಯ ಸಂಪುಟ- ವಿಮರ್ಶೆ

Author : ಸತ್ಯಮಂಗಲ ಮಹಾದೇವ

Pages 282

₹ 300.00




Year of Publication: 2021
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018

Synopsys

‘ದಲಿತ ಸಾಹಿತ್ಯ ಸಂಪುಟ- ವಿಮರ್ಶೆ’ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾದ ಕೃತಿ. ಈ ಕೃತಿಯ ಪ್ರಧಾನ ಸಂಪಾದಕರು ಡಾ. ಮನು ಬಳಿಗಾರ್ ಹಾಗೂ ಸಂಪಾದಕರು ಡಾ. ಸತ್ಯಮಂಗಲ ಮಹಾದೇವ. ಈ ಕೃತಿಯಲ್ಲಿ ಪ್ರೊ.ಬಿ. ಕೃಷ್ಣಪ್ಪನವರ ‘ಕುವೆಂಪು ಕಾದಂಬರಿಗಳಲ್ಲಿ ದಲಿತ ಜೀವನ ಚಿತ್ರಣ’, ಡಾ.ದೇವಯ್ಯ ಹರವೆ ಅವರ ದಲಿತ ಸಾಹಿತ್ಯ ಕೆಲವು ತಾತ್ವಿಕ ಚಿಂತನೆಗಳು, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಮಗಾರ ಭೀಮವ್ವ: ಎಚ್.ಎಸ್. ಶಿವಪ್ರಕಾಶ್, ಪ್ರೊ. ಅರವಿಂದ ಮಾಲಗತ್ತಿ ಅವರ ಸ್ತ್ರೀವಾದ- ದಲಿತವಾದದಿಂದ ದಲಿತ ಸ್ತ್ರೀವಾದದೆಡೆಗೆ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ದಲಿತ ಸಾಹಿತ್ಯ ಒಂದು ಹಿನ್ನೋಟ, ಡಾ.ಮುನಿವೆಂಕಟಪ್ಪ ಅವರ ದಲಿತ ಸಾಹಿತ್ಯ ಎತ್ತ ಸಾಗಿದೆ, ಡಾ.ಎಚ್.ಟಿ.ಪೋತೆ ಅವರ ಸಾಹಿತ್ಯ ಮತ್ತು ಸಮಾಜ, ಸುಬ್ಬು ಹೊಲೆಯಾರ್ ಅವರ ಜೀವ ಕಾರುಣ್ಯದ ಎನ್ಕೆ ಕಾವ್ಯ, ಡಾ.ಅರ್ಜುನ ಗೊಳಸಂಗಿ ಅವರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪುರಾಣ: ಮೊದಲ ವೈಚಾರಿಕ ದಲಿತ ಪುರಾಣ, ಡಾ. ಬಿ. ಮಹೇಶ್ ಹರವೆ ಅವರ ಹನೂರು ಚೆನ್ನಪ್ಪನವರ ಬೆಲ್ಲದ ದೋಣಿ, ಡಾ. ಮಹದೇವ ಶಂಕನಪುರ ಅವರ ಕಾವ್ಯ ಎಂಬುದು ಕವಿಯ ಧ್ಯಾನದ ಫಲ, ದು. ಸರಸ್ವತಿ ಅವರ ಮಹಿಳೆಯರ ಸಹಭಾಗಿತ್ವವಿಲ್ಲದೆ ಯಾವ ಚಳುವಳಿಯೂ ಅಪೂರ್ಣ, ಪ್ರೊ. ಸೋಮಣ್ಣ ಹೊಂಗರಹಳ್ಳಿ ಅವರ ಜಿ.ವೆಂಕಟಯ್ಯನವರ ಕಥೆಗಳಲ್ಲಿ ದಲಿತ ಸಂವೇದನೆ, ಡಾ.ಶಿವಾನಂದ ಕೆಳಗಿನಮನಿ ಅವರ ಕನ್ನಡ ದಲಿತ ಸಾಹಿತ್ಯ ವಿಚಾರ ವಿಮರ್ಶೆ, ಡಾ.ಬಿ.ಎಂ. ಪುಟ್ಟಯ್ಯ ಅವರ ಸೃಜನಶೀಲತೆಯ ಚರ್ಚೆ: ದಲಿತ ಸಾಹಿತ್ಯದ ಮೂಲಕ, ಡಾ.ಟಿ. ಯಲ್ಲಪ್ಪ ಅವರ ಸಿದ್ಧಲಿಂಗಯ್ಯನವರ ಕಾವ್ಯದ ಹೊಸ ಓದು, ಡಾ. ವಡ್ಡಗೆರೆ ನಾಗರಾಜಯ್ಯ ಅವರ ಬಸವಣ್ಣ ಮತ್ತು ದಲಿತ ಮೂಲದ ವಚನಕಾರರು, ಡಾ. ಅನಸೂಯ ಕಾಂಬಳೆ ಅವರ ಕಾವ್ಯ-ನಾಟಕ ಸಾಹಿತ್ಯಕ್ಕೆ ದಲಿತ ಕವಿಗಳ ಕೊಡುಗೆ, ಡಾ.ಸುಜಾತ ಚಲವಾದಿ ಅವರ ಮಹಿಳಾ ಸಾಹಿತ್ಯ-ದಲಿತ ಸಂವೇದನೆ, ಡಾ.ಅಣ್ಣಮ್ಮ ಅವರ ಆಧುನಿಕೋತ್ತರ ತೆಲುಗು ದಲಿತ ಸಾಹಿತ್ಯದ ಅರುಂಧತಿ ನಕ್ಷತ್ರ: ಪ್ರೊ. ಎಂಡ್ಲೂರಿ ಸುಧಾಕರ್, ಡಾ.ರವಿಕುಮಾರ್ ನೀಹಾ ಅವರ ದಲಿತ ಸಾಹಿತ್ಯದ ಛಂದೋಲಯಗಳು, ಡಾ. ಅಪ್ಪಗೆರೆ ಸೋಮಶೇಖರ ಅವರ ಮುಳ್ಳೂರು ನಾಗರಾಜರ ಸಾಹಿತ್ಯ ಅವಲೋಕನ, ಡಾ. ಎಸ್. ನರೇಂದ್ರ ಕುಮಾರ್ ಅವರ ಬಾಬಾಸಾಹೇಬರ ಬಹುಮುಖಿ ಕಾಳಜಿಯ ಅನಾವರಣ: ಎಲ್. ಹನುಮಂತಯ್ಯನವರ ಅಂಬೇಡ್ಕರ್ ನಾಟಕ, ಹುಲಿಕುಂಟೆ ಮೂರ್ತಿ ಅವರ ದಲಿತ ಮಹಿಳೆ ಮತ್ತು ಜಾಗತಿಕ ವಿವೇಕ, ಎಸ್.ಕೆ. ಮಂಜುನಾಥ್ ಅವರ ಕೆ.ಬಿ.ಕಾವ್ಯಮಾರ್ಗ:ಆದಿಮ ಪರಂಪರೆಗಳ ಬಹುರೂಪಿ ನೆಲೆಗಳು, ಡಾ. ಕಡವೀಗೆರೆ ಧರ್ಮವೀರ ಅವರ ಬಿ.ಟಿ. ಜಾಹ್ನವಿ ಅವರ ಕತೆಗಳಲ್ಲಿ ದಲಿತಲೋಕ, ಡಾ. ಸದಾನಂದ ದೊಡ್ಡಮನಿ ಅವರ ದಲಿತ ಲೋಕದ ಶೋಧದಲ್ಲಿ, ಡಾ. ನೇತ್ರಾವತಿ ಕೆ.ವಿ ಅವರ ಜಗದ ಗಾಯಗಳಿಗೆ ಮುಲಾಮು ಹುಡುಕುತ್ತಾ, ಡಾ.ಎಚ್. ಲಕ್ಷ್ಮೀನಾರಾಯಣಸ್ವಾಮಿ ಅವರ ಕವಿ ಹರಿಹರನ ಕಣ್ಣಪ್ಪ ಮತ್ತು ಮಾದಾರ ಚೆನ್ನಯ್ಯನ ರಗಳೆಗಳ ಪುನರಾವಲೋಕನ ಲೇಖನಗಳು ಸಂಕಲನಗೊಂಡಿವೆ.

About the Author

ಸತ್ಯಮಂಗಲ ಮಹಾದೇವ
(12 June 1983)

ಸತ್ಯಮಂಗಲ ಮಹಾದೇವ ಅವರು ಮೂಲತಃ ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕಿನ ಸತ್ಯಮಂಗಲ ಗ್ರಾಮದಲ್ಲಿ 12-06-1983 ರಲ್ಲಿ ರಾಜಣ್ಣ ಮತ್ತು ಜಯಮ್ಮ ದಂಪತಿಯ ಮಗನಾಗಿ ಜನಿಸಿದರು.  ಕನ್ನಡದ ಸಮಕಾಲೀನ ಯುವ ಬರಹಗಾರರಲ್ಲಿ ಸೂಕ್ಷ್ಮಸಂವೇದಿ ಹಾಗೂ ಜೀವಪರ ಚಿಂತನೆಯ ಕವಿಯಾಗಿ,  ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಸಂಪಾದಕೀಯ, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2017 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು.  ಕೇಂದ್ರಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ "ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನ" ಕೇರಳ, ಪಂಜಾಬ್, ಮಹಾರಾಷ್ಟ್ರ, ಅಸ್ಸಾಂ ಹೀಗೆ ರಾಷ್ಟ್ರದ ಅನೇಕ ಕಡೆಗಳಲ್ಲಿ ಕಾವ್ಯವಾಚನ ಮಾಡಿ ...

READ MORE

Related Books