ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ದಲಿತ ಚಳವಳಿ ಚರಿತ್ರೆ ಸಂಪುಟ-14. ಅಂಬೇಡ್ಕರ್ ಅವರ ಹೋರಾಟದ ಘೋಷವಾಕ್ಯ-ಶಿಕ್ಷಣ, ಸಂಘಟನೆ ಹೋರಾಟಗಳು ಅಕ್ಷರಶಃ ಜಾರಿಯಾಗಬೇಕಾದರೆ ಬದ್ಧತೆ ಇರಬೇಕು.ತಪ್ಪಿದರೆ, ಮೂರರ ಪೈಕಿ ಒಂದೂ ಘೋಷವಾಕ್ಯವು ಸಂಪೂರ್ಣವಾಗಿ ನನಸಾಗದು. ದಲಿತ ಚಳವಳಿಯು ಈ ಮೌಲ್ಯಗಳನ್ನು ತನ್ನ ಉಸಿರಾಗಿಸಿಕೊಂಡು 1970 ರಿಂದ ಕನಿಷ್ಠ 10 ಹತ್ತು ವರ್ಷಗಳ ಕಾಲ ಜಾಗೃತಿ ಮೂಡಿಸಿತ್ತು. ತದನಂತರ ಅದು ತನ್ನ ಗಟ್ಟಿತನವನ್ನು ಸಡಿಲವಾಗಿಸುತ್ತಾ ಇದೀಗ, ಇತಿಹಾಸದ ಸಿಟ್ಟನ್ನೂ ಉಳಿಸಿಕೊಳ್ಳುತ್ತಿಲ್ಲ. ಇಂತಹ ವಿದ್ಯಮಾನಗಳನ್ನು ಈ ಕೃತಿಯಲ್ಲಿ ಚರ್ಚಿಸಿ, ಹೋರಾಟವೊಂದರ ಏಳು-ಬೀಳುಗಳನ್ನು ವಿಶ್ಲೇಷಿಸಿರುವ ಕೃತಿ ಇದು.
ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...
READ MORE