'ಚ್ಯುತಿ' ಸರಸ್ವತಿ -ಸಿಂಧೂ ನದಿ ಪಾತ್ರದ ನಾಗರಿಕತೆಯ(ಹರಪ್ಪ -ಮೊಹಿಂಜದಾರೊ) ಅವಸಾನದ ಕಾಲದ ಹಿನ್ನಲೆಯ ಕತಾಹಂದರವಿರುವ ಕಾದಂಬರಿ. "ಚ್ಯುತಿ ಆ ಕಾಲದ ಮಾನವ ಸ್ವಭಾವದ ಚಿತ್ರಣ ಮತ್ತು ಒಂದು ಸಮಾಜದ ಸಂಕೀರ್ಣ ಪದರಗಳನ್ನು ಸುಲಿದು ಸರಳ , ಮೂಲಭೂತ ಶಕ್ತಿಗಳ ತಾಕಲಾಟದ ವಿವರಗಳನ್ನು ನೀಡುವ ಮಹತ್ವಾಕಾಂಕ್ಷೆಯ ಪ್ರಯೋಗವಾಗಿದೆ.
ಶಶಾಂಕ ಪರಾಶರ ಬೆಂಗಳೂರಿನ ನಿವಾಸಿ. ಬಿ.ಇ ಮೆಕ್ಯಾನಿಕಲ್ ಮತ್ತು ಎಂ.ಬಿ.ಎ ಪದವಿಗಳನ್ನು ಪಡೆದು ಪ್ರಸ್ತುತ ಒಂದು ಬಹುರಾಷ್ಟ್ರೀಯ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಪತ್ರಿಕೆಗಳಿಗಾಗಿ ಲೇಖನಗಳು ವಿಮರ್ಶಾ ಬರೆಹಗಳನ್ನು ರಚಿಸಿರುವುದಲ್ಲದೆ ಹಲವಾರು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತಿ ಇವರ ಆಸಕ್ತಿಯ ಕ್ಷೇತ್ರಗಳು. ಚ್ಯುತಿ ಇವರ ಮೊದಲ ಕಾದಂಬರಿ. ...
READ MORE