ಶಶಾಂಕ ಪರಾಶರ ಬೆಂಗಳೂರಿನ ನಿವಾಸಿ. ಬಿ.ಇ ಮೆಕ್ಯಾನಿಕಲ್ ಮತ್ತು ಎಂ.ಬಿ.ಎ ಪದವಿಗಳನ್ನು ಪಡೆದು ಪ್ರಸ್ತುತ ಒಂದು ಬಹುರಾಷ್ಟ್ರೀಯ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಪತ್ರಿಕೆಗಳಿಗಾಗಿ ಲೇಖನಗಳು ವಿಮರ್ಶಾ ಬರೆಹಗಳನ್ನು ರಚಿಸಿರುವುದಲ್ಲದೆ ಹಲವಾರು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತಿ ಇವರ ಆಸಕ್ತಿಯ ಕ್ಷೇತ್ರಗಳು. ಚ್ಯುತಿ ಇವರ ಮೊದಲ ಕಾದಂಬರಿ.