‘ಚಿತ್ರ ಸಮೂಹ’ ಲಂಕೇಶರು 45 ವರ್ಷಗಳ ಕಾಲ ಬರೆದ ಪದ್ಯಗಳ ಸಂಕಲನ. ಈ ಪುಸ್ತಕದ ಕುರಿತು ಬರೆಯುತ್ತಾ ಎಲ್ಲರೂ ಕವನವೆಂದು ವರ್ಣಿಸುವ ರೀತಿಯ ನನ್ನ ಬರವಣಿಗೆಗಳು ಇಲ್ಲಿವೆ ಎನ್ನುತ್ತಾರೆ ಲಂಕೇಶ್. ನನ್ನ ನೂರಾರು ಪುಟ್ಟ ಪದ್ಯಗಳು ಇಲ್ಲಿ ಸೇರಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಎನ್ನುತ್ತಾ, ನನ್ನ ಅಧ್ಯಪಕರೂ ಮಾರ್ಗದರ್ಶಿಯೂ ಆಗಿದ್ದ ಜೆ.ಪಿ.ರಾಜರತ್ನಂ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ದಿಂದ ಪ್ರಕಟಿಸಿದ ಕವನಗಳಿಂದ ಹಿಡಿದು ನನ್ನ ಅವರವತ್ತನೇ ವಯಸ್ಸಿನಲ್ಲಿ ಕವಿಮಿತ್ರರು ಕೆಲವರು ತಮ್ಮ ಕವನ ಓದುತ್ತಾರೆಂದು ಕೇಳಿ ನನ್ನದೊಂದು ಪದ್ಯ ಓದಿದೆ. ಅದೂ ಇಲ್ಲಿದೆ. ಒಬ್ಬನ ವ್ಯಕ್ತಿತ್ವ ಕಾವ್ಯಕ್ಕೆ ಇಡಿಯಾಗಿ ಬೇಕು. ಅದು ಪ್ರಬಂಧ, ವರದಿ, ತಮಾಷೆ ಇತ್ಯಾದಿಯಲ್ಲಿ ಹರಿದು ಹಂಚಿಹೋಗಬಾರದು ಎನ್ನುವವರಿದ್ದಾರೆ. ಎಲಿಯಟ್ ಹಾಗೆ ನಂಬಿದ್ದ. ಆದರೆ ನನ್ನ ಬದುಕನ್ನು ಸಾಗಿಸಲು ನನ್ನ ಕಾಲಕ್ಕೆ ಸ್ಪಂದಿಸಿ ಎಲ್ಲ ರೀತಿಯದನ್ನೂ ಬರೆಯಬೇಕಾಯಿತು. ಆದರಿಂದ ನನ್ನ ಬರೆಯುವ ಸಂತೋಷ ಕಡಿಮೆಯಾಗಲಿಲ್ಲ. ಟೆನಿಸನ್, ಸ್ಟಿನ್ ಬರ್ನ್ ತರಹದ ಪ್ರಸಿದ್ಧ ಕಾವ್ಯಜೀವಿಗಳೇ ಮಂಕಾಗಿದ್ದಾರೆ. ಗದ್ಯ, ಪದ್ಯ ಎಲ್ಲ ಬರೆದ ಪುಷ್ಟಿನ್ ಇವತ್ತಿಗೂ ಜೀವಂತವಾಗಿ ಅರ್ಥ ಹೊಮ್ಮಿಸುತ್ತಾನೆ. ಬರೆಯುವ ಪ್ರಾಮಾಣಿಕತೆ ಮುಖ್ಯವೇ ಹೊರತು ಪ್ರಕಾರಗಳಲ್ಲಿ ಪರಿಶುದ್ದತೆ ಅಲ್ಲ ಎನ್ನುತ್ತಾರೆ.
ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...
READ MORE