ಚಪ್ಪಲಿ ಮತ್ತು ನಾನು

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 68

₹ 40.00




Year of Publication: 2001
Published by: ಶುಭದ ಪ್ರಕಾಶನ
Address: ಜರಗನಹಳ್ಳಿ, ಬೆಂಗಳೂರು - 560078

Synopsys

‘ಚಪ್ಪಲಿ ಮತ್ತು ನಾನು’ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವನ ಸಂಕಲನ. ಈ ಕೃತಿಗೆ ಕೀರ್ತಿನಾಥ ಕುರ್ತಕೋಟಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ.. ಕವಿತೆಯ ತಲೆಬರಹ ‘ಚಪ್ಪಲಿ’, ಚಪ್ಪಲಿಯೂ ಒಂದು ಕಲಾಕೃತಿ, ಅದು ಸಮಗಾರನ ಅಭಿವ್ಯಕ್ತಿ, ಅದರಂತೆ ಅದು ಸಮಗಾರನ ಬುಡವೂ ಹೌದು ಎನ್ನುತ್ತಾರೆ. ಜೊತೆಗೆ ದೇವಸ್ಥಾನದ ಹೊರಗೆ ಸ್ಥಾನ ಪಡೆಯುತ್ತದೆಂದು ಸಮಗಾರ, ಅಯೋಗ್ಯವಾದ ಚಪ್ಪಲಿಗಳನ್ನು ಮಾಡುವುದಿಲ್ಲ. ಕಲೆಯ ನಿಯತ್ತು ಕಲೆಯ ನಿಯಮವಾಗಬೇಕು, ಕಾವ್ಯವೂ ಚಪ್ಪಲಿಯಂತೆ ಒಂದು ಕಲಾಕೃತಿ. ಅದರ ನಿಯಮ ಮತ್ತು ನಿಯತ್ತು ಒಂದೇ ಆಗಬೇಕು. ಕವಿಗೆ ಕಾವ್ಯ ಸಮಗಾರನ ಚಪ್ಪಲಿಯಂತೆ ಅವನ ಬುಡವೂ ಆಗಬೇಕು ಆಗುತ್ತದೆಯೇ..?, ಮೂಡ್ನಾಕೂಡು ಚಿನ್ನಸ್ವಾಮಿಯವರ ಈ ಕವಿತೆ ಅನೇಕ ಪ್ರಶ್ನೆಗಳನ್ನು ಕೇಳುತ್ತದೆ. ಉತ್ತರ ನಮ್ಮಲ್ಲಿದೆ. ಅದೇ ಚಿನ್ನಸ್ವಾಮಿಯವರ ಕಾವ್ಯದ ಸಾರ್ಥಕತೆ ಎಂದು ನಾನು ತಿಳಿದಿದ್ದೇನೆ ಎಂದು ಕೀರ್ತಿನಾಥ ಕುರ್ತಕೋಟಿ ತಿಳಿಸಿದ್ದಾರೆ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books