`ಚಪಡ'' ಇದು ಮೂರನೇಯ ಶತಮಾನದ ಕಥಾನಕವನ್ನು ಹೊಂದಿದೆ. ಕನ್ನಡ ಕಾದಂಬರಿ ಪ್ರಪಂಚದಲ್ಲೇ ಇಂಥದೊಂದು ವಿಷಯವನ್ನು ಆಯ್ದುಕೊಂಡು ಕಾದಂಬರಿಯೊಂದು ಈವರೆಗೂ ರಚಿತವಾಗಿರಲಿಲ್ಲ. ಲಿಪಿ, ಲಿಪಿಕಾರ, ಲಿಪಿಸಂಸ್ಕೃತಿಯ ಬಗೆಗೆ ಇದು ಪ್ರಥಮವಾಗಿ ಕನ್ನಡದಲ್ಲಿ ಕಾದಂಬರಿಯೊಂದು ರಚಿತವಾಗಿದೆ. ಅಂಥದೊಂದು ಮಹಾಮಣಿಹಕ್ಕೆ ಶ್ರೀಧರ ಎಚ್.ಜಿ ಕಾರಣರಾಗಿದ್ದಾರೆ. ಈ ಕಾದಂಬರಿಯ ಕಥಾನಕ ಚಿಕ್ಕದಾದರೂ ವಸ್ತುವಿಷಯ, ವಸ್ತುನಿರ್ಮಾಣ, ಕಲ್ಪಕತೆ, ಘಟನಾ ಕೌಶಲ್ಯ ಇವುಗಳಲ್ಲಿ ಅನನ್ಯತೆಯನ್ನು ಈ ಕಾದಂಬರಿಯಲ್ಲಿ ಸ್ಪಸ್ಟಿಸಿದ್ದಾರೆ. ಉತ್ತರ ಭಾರತದ ಪಾಟಲಿಪುತ್ರ ದಿಂದ ದಕ್ಷಿಣ ಭಾರತದ ಬ್ರಹ್ಮಗಿರಿ ವರೆಗಿನ ಸಾಂಸ್ಕೃತಿಕ ಬೃಹದ್ಬಾರತವನ್ನು ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಪ್ರಾಚೀನ ಭಾರತೀಯ ಬೌದ್ದಸಂಸ್ಕೃತಿಯ ಪುನಾರಚನೆಯನ್ನು ಈ ಕಾದಂಬರಿಯ ಮೂಲಕ ಆಗು ಮಾಡಿದ್ದಾರೆ.
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಚ್.ಜಿ. ಶ್ರೀಧರ ಅವರು ಕನ್ನಡ ವಿಭಾಗ ಮುಖ್ಯಸ್ಥರು ಕೂಡ. ಹೆಸರಾಂತ ವಿಮರ್ಶಕ, ಸಂಶೋಧಕರಾಗಿರುವ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಮುಂಡಿಗೆಹಳ್ಳದವರು. ಸಾಗರದ ಲಾಲ್‌ಬಹಾದೂರ್ ಶಾಸ್ತಿ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದಿದ್ದಾರೆ. ’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ' ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿ, ಪದವಿ ತರಗತಿ ಪಠ್ಯಪುಸ್ತಕಗಳ ರಚನಾ ಸಮಿತಿ; ಕ್ಯಾಲಿಕತ್ ವಿಶ್ವವಿದ್ಯಾಲಯದ ಪದವಿ ಪರೀಕ್ಷಾ ಮಂಡಳಿಯ ಸದಸ್ಯರಾಗಿರುವ ಅವರು ...
READ MORE