ಲೇಖಕ ಸ ರಘುನಾಥ ಅವರ ಕವನ ಸಂಕಲನ-ಚಂದ್ರಮಲ್ಲಿ. ಮೊರಸುನಾಡಿನ ಕವಿತೆಗಳು ಎಂಬ ಉಪಶೀರ್ಷಿಕೆ ನೀಡಲಾಗಿದೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಆರ್.ದಿಲೀಪ್ ಕುಮಾರ ಅವರು, ಕನ್ನಡ ಹಾಗೂ ತೆಲುಗು ಭಾಷೆಗಳ ನಡುವಿನ ಕೊಂಡಿಯಾಗಿ ನಿಂತಿರುವ ಹಿರಿಯ ಕವಿಗಳ ಪೈಕಿ ಸ. ರಘುನಾಥರು ಪ್ರಮುಖರು. ಒಂದಾಗಿ ಬದುಕುವ ಜನರ ಜೀವನಾಡಿಯ ಮಿಡಿತದ ಸೆಲೆಗಳನ್ನು ಬಲ್ಲವರು ಮಾತ್ರ ಸೃಜಿಸಲು ಸಾಧ್ಯವಾಗುವ ಬದುಕಿನ ಬೇರೆ ಬೇರೆ ಭಾವಗಳು ಇವರ ಕವಿತೆಗಳಲ್ಲಿ ಕಾಣಲು ಸಾಧ್ಯ. ಪರಂಪರಾಗತ ಕಾವ್ಯಗಳ ಹಿನ್ನಲೆಯಲ್ಲಿ ನೋಡುವುದಾದರೆ ಸಂಕಲನ ಮೊದಲ ಭಾಗದ ಕಾವ್ಯಗಳ ರೂಪವು ಎ.ಕೆ.ರಾಮಾನುಜನ್ ಅವರ ಕಾವ್ಯದ ಮುಂದುವರಿಕೆಯಾಗಿ ಕಾಣುತ್ತದೆ. ಅಲ್ಲದೆ, ಓದುಗರಿಂದ ಅಪಾರವಾದ ಸೂಕ್ಷ್ಮತೆಯನ್ನು ಬೇಡುತ್ತದೆ. ಬದುಕನ್ನು ಗ್ರಹಿಸುವ, ಗ್ರಹಿಸಿದ್ದನ್ನು ಕಟ್ಟಿಕೊಡುವ ಕವಿತೆಯು ಪಡೆದುಕೊಂಡಿರುವ ಅಭಿವ್ಯಕ್ತಿಯ ಕ್ರಮ ದೊಡ್ಡದು ಮತ್ತು ಮಹತ್ವದ್ದು. ಆಂತರಿಕ ಸತ್ವದ ಬಹುಸೂಕ್ಷ್ಮ ಪದರಗಳನ್ನು ಕಾವ್ಯದಲ್ಲಿನ ಮೃದುತ್ವವು, ಅವರೇ ಪ್ರತಿಕ್ಷಣ ನೆನೆಯುವ ಸು.ರಂ.ಎಕ್ಕುಂಡಿಯವರ ಗಾಢ ಪ್ರಭಾವ ಇದ್ದಿರಲೂ ಬಹುದು. ತಮ್ಮದೇ ನೆಲದ ದನಿಗೆ ಮಾರ್ದನಿಯಾಗಿ ಪರ್ಯಾಯ ಸಂಸ್ಕೃತಿಯ ಅನಾವರಣ ಮಾಡುತ್ತಲೇ ಕಾವ್ಯದ ನೆಲಗಳನ್ನು ರಘುನಾಥರು ಸೃಷ್ಟಿ ಮಾಡಿದ್ದಾರೆ. ಈ ಕಾರ್ಯವು ಅಪ್ರಜ್ಞಾಪೂರ್ವಕವಾಗಿ ನಡೆದಿರುವುದರಿಂದಲೇ ಇಲ್ಲಿನ ಕಾವ್ಯಗಳು ಗಟ್ಟಿಯಾಗಿ ತಮ್ಮ ಆಸ್ಮಿತೆಯನ್ನು ಸಾರುತ್ತಿವೆ ’ ಎಂದು ಪ್ರಶಂಸಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...
READ MORE